ಇಲ್ಲಿ ಸದ್ಯಕ್ಕೆ ಪಾನಿಪುರಿ ಮಾರಾಟ ನಿಷೇಧ: ಕಾರಣ ಮತ್ತೇನೂ ಅಲ್ಲ, ಇದು..

Panipuri
Published on

ಕಠ್ಮಂಡು: ಪಾನಿಪುರಿ ಎಂದಾಕ್ಷಣ ಸಾಮಾನ್ಯವಾಗಿ ಎಂಥವರ ಬಾಯಲ್ಲೂ ನೀರೂರಿ ಬಿಡುತ್ತದೆ. ಮಾತ್ರವಲ್ಲ, ರಸ್ತೆ ಬದಿಯಲ್ಲಿ ಪಾನಿಪುರಿ ಅಂಗಡಿ ಕಾಣಿಸುವುದು ಹೊಸದೇನಲ್ಲ. ಪಾನಿಪುರಿಗೆ ಅಂಥ ಬೇಡಿಕೆ ಇರುವುದರಿಂದಲೇ ಇದನ್ನು ಮಾರುವವರು ಕೂಡ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುತ್ತಾರೆ. ಆದರೆ ಇಲ್ಲೊಂದು ಕಡೆ ಪಾನಿಪುರಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಅಂದಹಾಗೆ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಈ ನಿಷೇಧ ಜಾರಿಗೊಂಡಿದೆ. ಇಲ್ಲಿ ಕಾಲರಾ ರೋಗದ ಹಾವಳಿ ಹೆಚ್ಚಾಗಿರುವುದರಿಂದ ಭಾರಿ ಪ್ರಮಾಣದಲ್ಲಿ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಇದ್ದಕ್ಕಿದ್ದಂತೆ ಕಾಲರಾ ಯಾಕೆ ಅತಿಯಾಗಿದೆ ಎಂಬುದಕ್ಕೆ ಇನ್ನೂ ಖಚಿತವಾದ ಕಾರಣ ಗೊತ್ತಾಗಿಲ್ಲ.

ಇಲ್ಲಿನ ಹಲವು ಪ್ರದೇಶಗಳಲ್ಲಿ ಕಾಲರಾ ಕಂಡುಬರಲಾರಂಭಿಸಿದ್ದರಿಂದ ಸ್ಥಳೀಯಾಡಳಿತ ಆತಂಕಗೊಂಡಿದೆ. ಅಲ್ಲದೆ ಹಲವು ಪ್ರದೇಶಗಳಲ್ಲಿನ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾ ಇದೆ ಎನ್ನಲಾಗಿದೆ. ಹೀಗಾಗಿ ಕಠ್ಮಂಡುವಿನ ಲಲಿತ್​ಪುರದಲ್ಲಿ ಭಾನುವಾರದಿಂದ ಪಾನಿಪುರಿ ಮತ್ತು ಚಟ್​ಪಟೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net