

ತುಮಕೂರು: ಮಾಜಿ ಸಚಿವ ಸೊಗಡು ಶಿವಣ್ಣ ಜೋಳಿಗೆ ಹಿಡಿದು ಮತಭಿಕ್ಷೆ ಹೊರಟಿದ್ದು ಚರ-ಸ್ಥಿರಾಸ್ತಿಯಷ್ಟೇ ವಿವಿಧ ಬ್ಯಾಂಕ್‌ಗಳಲ್ಲಿ 29.14 ಕೋ.ರೂ., ಸಾಲದ ಹೊಣೆ ಹೊಂದಿದ್ದಾರೆ. 4 ಬಾರಿ ಶಾಸಕರಾಗಿ, 2 ಬಾರಿ ಮಂತ್ರಿ ಆಗಿದ್ದ ಸೊಗಡು ಚರ-ಸ್ಥಿರಾಸ್ತಿಯ ಒಟ್ಟು ಮೌಲ್ಯ 37.48 ಕೋ.ರೂ., !
ಎಂಜಿ ಹೆಕ್ಟರ್ ವಾಹನ ಹೊಂದಿರುವ ಶಿವಣ್ಣ ವಿವಿಧ ಬ್ಯಾಂಕ್‌ಗಳಲ್ಲಿ ಷೇರು, ಠೇವಣಿ ಸೇರಿ 43.03 ಲಕ್ಷ ರೂ., ಚರಾಸ್ತಿ ಹೊಂದಿದ್ದರೆ, ಪತ್ನಿ ಎಸ್.ನಾಗರತ್ನ 160 ಗ್ರಾಂ ಚಿನ್ನಾಭರಣ ವಿವಿಧ ಬ್ಯಾಂಕ್‌ಗಳಲ್ಲಿ ಷೇರು, ಠೇವಣಿ ಸೇರಿ 16.64 ಲಕ್ಷ ರೂ., ಚರಾಸ್ತಿ ತೋರಿಸಿದ್ದಾರೆ. ಇನ್ನೂ 21.30 ಕೋ.ರೂ., ಸ್ಥಿರಾಸ್ತಿ ಹೊಂದಿರುವ ಶಿವಣ್ಣ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಫ್ಲಾಟ್ , ಚಿಕ್ಕಪೇಟೆಯಲ್ಲಿ ವಸತಿ ಕಟ್ಟಡ ಜತೆಗೆ ಕೃಷಿ, ಕೃಷಿಯೇತರ ಭೂಮಿ ಹೊಂದಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿ 2 ವಾಣಿಜ್ಯ ಕಟ್ಟಡ, ರಂಗಾಪುರದಲ್ಲಿ ವಾಸದ ಮನೆ ಸೇರಿದಂತೆ 15.50 ಕೋ.ರೂ., ಸ್ಥಿರಾಸ್ತಿ ಪತ್ನಿ ನಾಗರತ್ನ ಹೆಸರಲ್ಲಿದೆ.
29.14 ಕೋಟಿ ಸಾಲ !: ವೀರಶೈವ ಬ್ಯಾಂಕ್ 10.80 ಕೋಟಿ.ರೂ., ಕೆಎಸ್‌ಎಫ್‌ಸಿಯಲ್ಲಿ 3.75 ಕೋ.ರೂ., ಸ್ನೇಹ ಸಂಗಮದಲ್ಲಿ 4 ಕೋಟಿ ರೂ. ಒಟ್ಟು 18.74 ಕೋ.ರೂ.,ಸಾಲ ಶಿವಣ್ಣ ಹೆಗಲ ಮೇಲಿದೆ. ಪತ್ನಿ ಹೆಸರಲ್ಲಿ ವೈಶ್ಯ ಕೋ ಆಪರೇಟಿವ್, ಸ್ನೇಹಸಂಗಮದಲ್ಲಿ ಒಟ್ಟು 10.67 ಕೋ.ರೂ. ಸಾಲ ಹೊಂದಿರುವುದಾಗಿ ಆಸ್ತಿ ವಿವರದಲ್ಲಿ ಘೋಷಿಸಿದ್ದಾರೆ.