ಪರಂಗಿಂತ ಪತ್ನಿಯೇ ಶ್ರೀಮಂತೆ !

Param_Web
Published on

ತುಮಕೂರು: ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ್‌ಗಿಂತ ಪತ್ನಿ ಕನ್ನಿಕಾಪರಮೇಶ್ವರಿ ಅವರೇ ಶ್ರೀಮಂತೆ! ಕನ್ನಿಕಾ ಅವರ ವಾರ್ಷಿಕ ಆದಾಯವೇ 1.47 ಕೋ.ರೂ., ಇದ್ದರೆ ಪರಂ 25.62 ಲಕ್ಷ ರೂ., ವಾರ್ಷಿಕ ಆದಾಯ ಇದೆ.

ಪರಂ ಕುಟುಂಬದ ಚರ-ಸ್ಥಿರಾಸ್ತಿಯ ಒಟ್ಟು ಮೌಲ್ಯವು 21.27 ಕೋ.ರೂ., ನಷ್ಟಿದ್ದು ಅವರ ಬಳಿ 1 ಕೋಟಿ ಮೌಲ್ಯದ ಆಡಿ ಕಾರಿದೆ. ಜತೆಗೆ ಟಾಟಾ ಸಫಾರಿ, ಸ್ಕೋಡಾ ಕಾರುಗಳಿ ಇವೆ. ಪತ್ನಿ ಬಳಿ 41 ಲಕ್ಷ ಮೌಲ್ಯದ ಮಿನಿಕೂಪರ್ ಇದೆ. ಪತ್ನಿ ಕನ್ನಿಕಾ ಬಳಿಯಿರುವ ಚರ-ಸ್ಥಿರಾಸ್ತಿ ಮೌಲ್ಯ 11.37 ಕೋ.ರೂ., ಪರಂ ತೋರಿಸಿಕೊಂಡಿರುವುದು 9.89 ಕೋ.ರೂ., ಮೌಲ್ಯದ ಆಸ್ತಿ. ಇಬ್ಬರಿಗೂ ಕೃಷಿ ಭೂಮಿ ಅಂದರೆ ಇಷ್ಟವಿಲ್ಲ. ಇಬ್ಬರ ಹೆಸರಲ್ಲಿ ಬೆಂಗಳೂರಿನಲ್ಲಿ ಜಂಟಿ ವಸತಿ ಕಟ್ಟಡಗಳಿದ್ದು ಇದರ ಮೌಲ್ಯ 10 ಕೋಟಿ.

ಸಾಲ ಕೂಡ ಪರಂ ಹೆಗಲ ಮೇಲಿದೆ. ಪರಂ 4.88 ಕೋ. ರೂ., ಸಾಲ ತೋರಿಸಿದ್ದರೆ, ಕನ್ನಿಕಾ ಹೆಸರಲ್ಲಿ 4.34 ಕೋ.ರೂ., ಸಾಲ ಇದೆ. ಇನ್ನೂ ಕರೋನಾ ಸಂದರ್ಭದಲ್ಲಿ ಮೇಕುದಾಟು ನಡಿಗೆ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿದ್ದ ಹಿನ್ನೆಲೆ ಕನಕಪುರದಲ್ಲಿ, ಆದಾಯ ತೆರಿಗೆ ಮುಂಭಾಗ ಪ್ರತಿಭಟನೆ, ಇಡಿ ಕಚೇರಿಗೆ ಮುತ್ತಿಗೆ ಹಾಕಿದ್ದಕ್ಕೆ ಬೆಂಗಳೂರಿನ ಶಿವಾಜಿನಗರ, ಸಿದ್ದಾಪುರ ಠಾಣೆಯಲ್ಲಿ ಪರಂ ವಿರುದ್ಧ ಪ್ರಕರಣ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net