ಅದು ದೇವೇಗೌಡರು ಜನರಿಂದ ಗಳಿಸಿದ ಪದವಿ; ಫಾದರ್ಸ್ ಡೇಯಂದು ಕುಮಾರಸ್ವಾಮಿ ಹೇಳಿದ್ದೇನು?

HDK
Published on

ಬೆಂಗಳೂರು: ಇಂದು ಫಾದರ್ಸ್​ ಡೇ. ತಂದೆಯ ಕುರಿತು ಬಹುತೇಕ ಎಲ್ಲರೂ ತಮ್ಮ ಅನಿಸಿಕೆ-ಅನುಭವಗಳನ್ನು ಹೇಳಿಕೊಂಡಿದ್ದಾರೆ, ಇನ್ನೂ ಹೇಳಿಕೊಳ್ಳುತ್ತಲೇ ಇದ್ದಾರೆ. ಅದೇ ರೀತಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರ ಕುರಿತು ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ.

ಸಹೋದರರೂ ಸೇರಿದಂತೆ ತಮ್ಮ ಬಾಲ್ಯ ಹೇಗಿತ್ತು, ಆಗ ಅಪ್ಪನೊಂದಿಗೆ ಒಡನಾಟ ಯಾಕೆ ಕಡಿಮೆ ಇತ್ತು ಎಂಬುದನ್ನೆಲ್ಲ ನೆನಪಿಸಿಕೊಂಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ದೇವೇಗೌಡರ ವಿಶಿಷ್ಟ ಪದವಿಯೊಂದರ ಕುರಿತು ಹೇಳಿದ್ದಾರೆ.

'ನಾನು, ನನ್ನ ಒಡಹುಟ್ಟಿದವರು ಬಾಲ್ಯದಲ್ಲಿ ದೇವೇಗೌಡರನ್ನು ನೋಡುತ್ತಿದ್ದದ್ದೇ ಅಪರೂಪ. ಕುಟುಂಬಕ್ಕಿಂತಲೂ ಜನರ ಹಿತ ಅವರಿಗೆ ಮುಖ್ಯವಾಗಿದ್ದರ ಫಲ ಅದು. ಹೀಗಾಗಿಯೇ ಅವರನ್ನು ಬಹುತೇಕರು ಅಭಿಮಾನದಿಂದ "ಅಪ್ಪಾಜಿ" ಎನ್ನುತ್ತಾರೆ. ಅದು ದೇವೇಗೌಡರು ಜನರಿಂದ ಗಳಿಸಿದ ಪದವಿ. ಇಂದು ತಂದೆಯ ದಿನ ಹಾಗಾಗಿಯೇ ಇದನ್ನು ಹೇಳಬೇಕಾಯ್ತು..' ಎಂಬುದಾಗಿ ಹೇಳುವ ಮೂಲಕ ಎಚ್​ಡಿಕೆ ತಂದೆಗೆ ಫಾದರ್ಸ್ ಡೇ ಶುಭಾಶಯ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net