ಮಾಜಿ ಸಿಎಂ ಪುತ್ರಿ ಲಲಿತಾ ಜವಳಿ ನಿಧನ

ಕಲಬುರಗಿ ಹಿರಿಯ ಸಮಾಜ ಸೇವಕಿ  ನಗರದ ಐವಾನ್-ಇ-ಶಾಹಿ ಪ್ರದೇಶದ ನಿವಾಸಿಯಾಗಿದ್ದ ಲಲಿತಾ ಬಿ.ಜಿ.ಜವಳಿ (೭೧) ಗುರುವಾರ ನಿಧನರಾದರು. ಸೆ.೨೬ ರಂದು ಅವರ ತಾಯಿ ಶಾರದಾ ವೀರೇಂದ್ರ ಪಾಟೀಲ್ ನಿಧನರಾಗಿದ್ದರು. ತಾಯಿ ನಿಧನವಾದ ಕೆಲ ದಿನಗಳಲ್ಲಿಯೇ ಮಗಳು ಕೊನೆಯುಸಿರಳೆದಿದ್ದು  ಪಾಟೀಲ್ ಮತ್ತು ಜವಳಿ ಪರಿವಾರಕ್ಕೆ ಮತ್ತೊಂದು ಆಘಾತವಾಗಿದೆ.
IMG-20231005-WA0044
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹಿರಿಯ ಸಮಾಜ ಸೇವಕಿ  ನಗರದ ಐವಾನ್-ಇ-ಶಾಹಿ ಪ್ರದೇಶದ ನಿವಾಸಿಯಾಗಿದ್ದ ಲಲಿತಾ ಬಿ.ಜಿ.ಜವಳಿ (೭೧) ಗುರುವಾರ ನಿಧನರಾದರು. ಸೆ.೨೬ ರಂದು ಅವರ ತಾಯಿ ಶಾರದಾ ವೀರೇಂದ್ರ ಪಾಟೀಲ್ ನಿಧನರಾಗಿದ್ದರು. ತಾಯಿ ನಿಧನವಾದ ಕೆಲ ದಿನಗಳಲ್ಲಿಯೇ ಮಗಳು ಕೊನೆಯುಸಿರಳೆದಿದ್ದು  ಪಾಟೀಲ್ ಮತ್ತು ಜವಳಿ ಪರಿವಾರಕ್ಕೆ ಮತ್ತೊಂದು ಆಘಾತವಾಗಿದೆ.
ಲಲಿತಾ ಅವರು ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್ ಅವರ  ಹಿರಿಯ ಪುತ್ರಿ. ಕಲಬುರಗಿಯ ಮಾಜಿ ಸಂಸದ ಹಾಗೂ ಹೈಕ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿರುವ ಡಾ.ಬಿ.ಜಿ,ಜವಳಿ ಅವರ ಪತ್ನಿ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿ ಬಿ.ಜಿ.ಜವಳಿ, ಪುತ್ರ ನಿತೀನ್ ಜವಳಿ, ಇಬ್ಬರು ಪುತ್ರಿಯರು, ಸಹೋದರ ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಲಲಿತಾ ಅವರು ಮಾಜಿ ಸಿಎಂ ವಿರೇಂದ್ರ ಪಾಟೀಲ್ ಮುದ್ದಿನ ಮಗಳಾಗಿದ್ದಳು.  ಬಿ.ಜಿ.ಪಾಟೀಲ್ ಅವರ ಯಶಸ್ಸಿನ ಹಿಂದಿನ ರೂವಾರಿಯಾಗಿದ್ದು, ತಮ್ಮದೇ ಆದ ಶೈಲಿಯಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದರು. ಕಳೆದ ಕೆಲ ತಿಂಗಳಿAದ ಅವರು ಅನಾರೋಗ್ಯದಿಂದ ಹಾಸಿಗೆ  ಹಿಡಿದಿದ್ದರು.
ಗುರುವಾರ  ಬೆಳಗ್ಗೆ ನಗರದಲ್ಲಿ ಕೊನೆಯುಸಿರೆಳದರು. ಶುಕ್ರವಾರ ಮಧ್ಯಾಹ್ನ ೧೨-೩೦ ಗಂಟೆಯವರೆಗೂ ನಗರದ ಐವಾನ್-ಇ-ಶಾಹಿ ಪ್ರದೇಶದ ನೀಲಕಂಠರಾವ ಪಾಟೀಲ್ ಮಾರ್ಗದಲ್ಲಿರುವ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ಪಾರ್ಥಿವ ಶರೀರವನ್ನು ಆಳಂದ ರಸ್ತೆಯಲ್ಲಿರುವ ಕಲಬುರಗಿ ತಾಲೂಕಿನ ಪಟ್ಟಣ ಕ್ರಾಸ್ ಸಮೀಪದಲ್ಲಿ (ಟೋಲ್ ನಾಕಾ ಬಳಿ) ಇರುವ ಡಾ.ಜವಳಿ ಅವರ ತೋಟದಲ್ಲಿ ಮಧ್ಯಾಹ್ನ ೨-೩೦ ಗಂಟೆಗೆ ಅಂತಿಮ ಸಂಸ್ಕಾರ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು  ಕುಟುಂಬದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net