ದುಶ್ಚಟಗಳಿಗೆ ಬಲಿಯಾಗದಿರಿ

11ALD06
ಅಳವಂಡಿ ಸಮೀಪದ ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮದಲ್ಲಿ ಎಎಸ್‌ಐ ಶಶಿಕಾಂತ್ ಮಾತನಾಡಿದರು. ಶಿಕ್ಷಕರಾದ ಗಿರಿಯಪ್ಪ, ಮರ್ದಾನಲಿ, ಸುನಿತಾ, ಸೌಮ್ಯಾ, ಶ್ವೇತಾ, ಪೊಲೀಸ್ ಮಲ್ಲೇಶ್ ಇತರರಿದ್ದರು.
Published on

ಅಳವಂಡಿ: ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಿ ಎಂದು ಎಎಸ್‌ಐ ಶಶಿಕಾಂತ್ ರಾಥೋಡ್ ಹೇಳಿದರು.

ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಯುವ ಜನರೇ ದೇಶದ ನಿಜವಾದ ಆಸ್ತಿ. ಆದರೆ, ಪ್ರಸ್ತುತ ಸಮಾಜದಲ್ಲಿ ಯುವಕರು ವಿದ್ಯಾರ್ಥಿಗಳು, ದುಶ್ಚಟಗಳಿಗೆ ಬಲಿಯಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳಿಂದ ಕುಟುಂಬ ಬೀದಿಗೆ ಬರುತ್ತದೆ. ಉತ್ತಮವಾಗಿ ಬದುಕಿ ಇತರರಿಗೆ ಮಾದರಿಯಾಗಿ ಎಂದರು.

ಶಿಕ್ಷಕ ಗಿರಿಯಪ್ಪ ಹಾರನಹಳ್ಳಿ ಮಾತನಾಡಿ, ಯುವಕರು ಮಾದಕ ವಸ್ತುಗಳನ್ನು ಸೇವಿಸಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಣೆಯ ದೊಡ್ಡ ಜಾಲಗಳೇ ಇವೆ.

ಇವರಿಗೆ ಯುವಕರೇ ಟಾರ್ಗೆಟ್. ಹೆಣ್ಣು ಮಕ್ಕಳು ಸಹ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ಶಿಕ್ಷಕರಾದ ಮರ್ದಾನಲಿ ಗಡಾದ, ಸುನಿತಾ ಯಾಳಗಿ, ಸೌಮ್ಯಾ, ಶ್ವೇತಾ, ಪ್ರಶಿಕ್ಷಣಾರ್ಥಿ ಐಶ್ವರ್ಯಾ, ಸೋಮಣ್ಣ, ಪೊಲೀಸ್ ಸಿಬ್ಬಂದಿ ಮಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net