ಭಾಷೆಯ ಉಳಿವಿನತ್ತ ಸರ್ವರ ಆದ್ಯತೆ

byn (2)
Published on

ವಿಜಯವಾಣಿ ಸುದ್ದಿಲ ಬೈಂದೂರು

ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಭಾಷೆಯ ಮೂಲಕವೇ ವ್ಯಕ್ತವಾಗುತ್ತದೆ. ನಮ್ಮ ಹಿರಿಯರ ಬಳಸುತ್ತಿದ್ದ ಭಾಷೆ ಬಗ್ಗೆ ಹೆಮ್ಮೆ ಹೊಂದಿರುವ ಜತೆಗೆ ಅದನ್ನು ಬಳಕೆಯ ಕುರಿತು ಗಮನ ನೀಡಬೇಕು. ನಮ್ಮತನ ಮರೆಯದಿರುವುದರ ಜತೆಗೆ ಹೊಸತನಕ್ಕೂ ಹೊಂದಿಕೊಳ್ಳಬೇಕು ಎಂದು ಕುಂದ ಅಧ್ಯಯನ ಪೀಠದ ಸದಸ್ಯ ಕೆ.ಜಯಪ್ರಕಾಶ ಶೆಟ್ಟಿ ಹೇಳಿದರು.

ವಿಶ್ವ ಕುಂದಾಪ್ರ ಕನ್ನಡ ದಿನ ಪ್ರಯುಕ್ತ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆ ಯಡ್ತರೆ ನೆಲ್ಯಾಡಿ ಬೈಲಿನಲ್ಲಿ ಆಯೋಜಿಸಿದ ಕೆಸರುಗದ್ದೆ ಕ್ರೀಡಾಕೂಟ ಗಮ್ಮತ್ತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶಕುಮಾರ್ ಶೆಟ್ಟಿ, ಖಜಾಂಚಿ ಮೋಹನದಾಸ್ ಶೆಟ್ಟಿ ಮುಂಬೈ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಪ್ರಮುಖರಾದ ರಮೇಶ ಶೆಟ್ಟಿ, ದೀಪಕ್‌ಕುಮಾರ್ ಶೆಟ್ಟಿ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಡಾ. ಗೋವಿಂದ ಬಾಬು ಪೂಜಾರಿ, ಆದರ್ಶ ಶೆಟ್ಟಿ, ರಮೆಶ ದೇವಾಡಿಗ, ವೆಂಕಟ್ರಮಣ ಶೇರುಗಾರ್, ನೆಲ್ಯಾಡಿ ದಿವಾಕರ ಶೆಟ್ಟಿ, ಉದಯಕುಮಾರ್ ಶೆಟ್ಟಿ ಪಡುಕೆರೆ, ಕೆ.ಸಿ.ರಾಜೇಶ ಕುಂದಾಪುರ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಉಪ್ಪುಂದ ಸ್ವಾಗತಿಸಿದರು. ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ವಿವಿಧ ಭಜನಾ ತಂಡಗಳು, ಎತ್ತಿನಗಾಡಿ, ಯಕ್ಷಗಾನ ವೇಷಗಳು, ಚೆಂಡೆ ತಂಡಗಳಿಂದ ಮೆರವಣಿಗೆ ನಡೆಯಿತು. ನಂತರ ಕಂಬಳಗದ್ದೆಯಲ್ಲಿ 35 ಜತೆ ಕೋಣಗಳ ಆಕರ್ಷಕ ಕಂಬಳ ನಡೆಯಿತು. ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net