ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ವತಿಯಿಂದ ಅರಳಾಳಸಂದ್ರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ಶಿಬಿರ ಅನುಬಂಧ-2024 ಆರು ದಿನಗಳ ಶಿಬಿರವನ್ನ ಉದ್ಘಾಟಿಸಿ ಮಾತನಾಡಿದ ಅವರು ಸಾಮಾಜಿಕ ಆರ್ಥಿಕ ಪ್ರಗತಿ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಸುಸ್ಥಿರ ಅಭಿವೃದ್ಧಿಯ ಕಡೆಗೆ ಅನೇಕ ಯೋಜನೆಗಳು ಕಾರ್ಯಕ್ರಮಗಳು ಜಗತಿನಾದ್ಯಂತ ಪ್ರಯತ್ನಗಳು ನಡೆದಿದ್ದು, ಈ ನಿಟ್ಟಿನಲ್ಲಿ ವೃತ್ತಿಪರ ಸಮಾಜಕಾರ್ಯ ಹಲವಾರು ವೈಶಿಷ್ಟ್ಯತೆ, ಸೈದಾಂತಿಕ ಹಾಗೂ ಪ್ರಾಯೋಗಿಕ ಕಲಿಕೆಗಳ ಮೂಲಕ ವಿಶೇಷ ಜ್ಞಾನ ಹಾಗೂ ಕೌಶಲ್ಯಗಳನ್ನು ಅಳವಡಿಸಿಕೊಂಡು. ಗ್ರಾಮೀಣ ಸಮುದಾಯದೊಂದಿಗೆ ಬೆರೆತು ಹಲವಾರು ವಿಚಾರಗಳ ಬಗ್ಗೆ ಅರಿವು ಜಾಗೃತಿ ಹಾಗೂ ಚಿಂತನಾಮಂಥನಗಳನ್ನು ನಡೆಸಿ ವೃತ್ತಿಪರ ಸಮಾಜ ಕಾರ್ಯಕರ್ತರ ಪಾತ್ರ ಹಾಗೂ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.