ಸರ್ಕಾರದ ಸವಲತ್ತು ಪಡೆಯಲು ಎಲ್ಲರೂ ಒಗ್ಗೂಡಬೇಕು

ಸರ್ಕಾರದ ಸವಲತ್ತು ಪಡೆಯಲು ಎಲ್ಲರೂ ಒಗ್ಗೂಡಬೇಕು
Published on

ನಾಪೋಕ್ಲು: ಸರ್ವ ಸದಸ್ಯರು ಒಗ್ಗೂಡಿದರೆ ಮಾತ್ರ ಸಂಘದ ಬೆಳವಣಿಗೆ ಸಾಧ್ಯ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡಿರ ನಾಣಯ್ಯ ಹೇಳಿದರು.

ಇಲ್ಲಿನ ಮಹಿಳಾ ಸಮಾಜದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದಿಂದ ಎಲ್ಲರಿಗೂ ಪ್ರಯೋಜನಾಗಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಎಲ್ಲಾ ಸದಸ್ಯರು ಒಗ್ಗೂಡಬೇಕು. ಹೋಬಳಿ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಮಾಜಿ ಸೈನಿಕರಿದ್ದಾರೆ. ಆದರೆ, ಮಹಾಸಭೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಹೆಚ್ಚಿನ ಸದಸ್ಯರು ಸಭೆಯಲ್ಲಿ ಪಾಲ್ಗೊಂಡರೆ ಸೈನಿಕರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದರು.

ಸಂಘದ ಕಾರ್ಯದರ್ಶಿ ಕೇಟೋಳಿರ ಅಚ್ಚಪ್ಪ ಹಾಗೂ ಖಜಾಂಚಿ ಕರೀಂ ವಾರ್ಷಿಕ ಲೆಕ್ಕ ಪತ್ರ ಮತ್ತು ಇತರ ವಿಷಯಗಳ ಬಗ್ಗೆ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.

ಉಪಾಧ್ಯಕ್ಷ ಅಪ್ಪುಮಣಿಯಂಡ ನಾಣಯ್ಯ, ನಿರ್ದೇಶಕ ಪುಲ್ಲೇರ ಪಳಂಗಪ್ಪ, ಪಾಡಿಯಮ್ಮಂಡ ಅಪ್ಪಣ್ಣಮಯ್ಯ, ಅಮ್ಮಂಡ ಅಶೋಕ್, ಮುಂಡೋಟಿರ ಪಾರ್ವತಿ, ಕಂಬೆಯಂಡ ಅಪ್ಪಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net