

ಶಿಗ್ಗಾಂವಿ: ಕಾರ್ಯಾಗಾರದ ಲಾಭವನ್ನು ಎಲ್ಲರೂ ಪಡೆದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಹುಬ್ಬಳ್ಳಿಯ ಕಾರ್ವಿುಕ ಹೋರಾಟಗಾರ ಡಾ. ಕೆ. ಎಸ್. ಶರ್ಮಾ ಹೇಳಿದರು.
ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ ಸಭಾಭವನದಲ್ಲಿ ಶನಿವಾರ ಉದ್ಯಮಶೀಲತೆ ಮತ್ತು ಕಾರ್ವಿುಕರ ಸೌಲಭ್ಯಗಳ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಮತ್ತು ಉದ್ಯೋಗಕ್ಕೆ ಒತ್ತು ಕೊಡದೇ ದೇಶದ ಅಭಿವೃದ್ಧಿ ಅಸಾಧ್ಯ, ಇಂದಿನ ಸರ್ಕಾರಗಳು ಗ್ರಾಮೀಣ ಭಾಗದ ಕಾರ್ವಿುಕರಿಗೆ ಎಷ್ಟು ಮಹತ್ವ ಕೊಡಬೇಕಿತ್ತೊ ಅಷ್ಟು ಮಹತ್ವ ಕೊಟ್ಟಿಲ್ಲ ಎಂದರು.
ಕೊಯಮತ್ತೂರಿನ ಟೆಕ್ನೋ ಮ್ಯಾನೇಜ್ವೆುಂಟ್ ಕನ್ಸಲ್ಟಂಟ್ ಹಾಗೂ ಕಾರ್ಪೆರೇಟ್ ಟ್ರೖೆನರ್ನ ಪ್ರೊಫೆಸರ್ ಡಾ. ಆರ್. ಕೃಷ್ಣ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಹಾವೇರಿ ಜಿಲ್ಲಾ ಕಾರ್ವಿುಕ ಅಧಿಕಾರಿ ಜಿ. ಇಬ್ರಾಹಿಂ, ಹಾವೇರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿನಾಯಕ ಜೋಷಿ ಭಾಗವಹಿಸಿದ್ದರು.
ನಂತರ ಕಾರ್ವಿುಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸರಕಾರಿ ಸೌಲಭ್ಯಗಳು, ಮತ್ತು ಕಾನೂನು ಅರಿವು ಮತ್ತು ಉದ್ಯಮಶೀಲತೆಯ ಅಭಿವೃದ್ಧಿ ಹಾಗೂ ಸೌಲಭ್ಯಗಳ ಕುರಿತು ವಿಚಾರಗೋಷ್ಠಿಗಳು ಜರುಗಿದವು.
ಪ್ರಾಚಾರ್ಯ ಪ್ರೊ. ಪಿ. ಸಿ. ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ. ಸಿ. ಎಚ್. ತಾವರಗೊಂದಿ, ಪ್ರೊ. ಎಸ್. ಎಸ್. ಮಲ್ಲಾಡದ, ಕಾರ್ವಿುಕ ಸಂಘದ ಅಧ್ಯಕ್ಷ ಫಕೀರೇಶ ಶಿಗ್ಗಾವಿ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ಕಾರ್ವಿುಕರು, ಕಾರ್ವಿುಕ ಸಂಘದ ಸದಸ್ಯರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.