ಪ್ರತಿಯೊಬ್ಬರೂ ಹೆಸರು ನೋಂದಾಯಿಸಿ

ಹಗರಿಬೊಮ್ಮನಹಳ್ಳಿ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ಆರ್.ಕವಿತಾ ಉದ್ಘಾಟಿಸಿದರು. ತಾಪಂ ಇಒ ಡಾ.ಜಿ.ಪರಮೇಶ್ವರಪ್ಪ, ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ, ವಿದ್ಯಾನಿಕೇತನ ಕಾಲೇಜು ಪ್ರಾಚಾರ್ಯ ಎಂ.ಆರ್.ಶೇಖರ್, ಶಿಕ್ಷಣ ಇಲಾಖೆಯ ಮ್ಯಾನೇಜರ್ ಗುರುಬಸವರಾಜ, ತಾಪಂ ಮ್ಯಾನೇಜರ್ ಮಹಾಂತೇಶ, ಚುನಾವಣಾ ನಿರ್ವಾಹಕ ಆದರ್ಶ ಇತರರಿದ್ದರು.

Published on

ಹಗರಿಬೊಮ್ಮನಹಳ್ಳಿ: ಮತದಾನಕ್ಕೆ ಮಹತ್ವವಿದ್ದು, ಅದು ನಮ್ಮ ಜನ್ಮಸಿದ್ಧ ಹಕ್ಕಾಗಿದೆ ಎಂದು ತಹಸೀಲ್ದಾರ್ ಆರ್.ಕವಿತಾ ಹೇಳಿದರು.

ಪಟ್ಟಣದ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಆಡಳಿತ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು. ಪಿಯುಸಿ ವ್ಯಾಸಂಗ ಮಾಡುತ್ತಿರುವ ನೀವು ಮುಂದಿನ ದಿನಗಳಲ್ಲಿ ಮತದಾನದ ಹಕ್ಕು ಪಡೆಯುತ್ತಿರಿ. ಆದ್ದರಿಂದ ಪ್ರತಿಯೊಬ್ಬರೂ ನೋಂದಣಿ ಮಾಡಿಸಿ ಎಂದು ಕರೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಪಿ.ರಮೇಶ ಮಾತನಾಡಿ, ಮತದಾನದಿಂದ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆಮಾಡಬಹುದು. ಅಮೂಲ್ಯವಾದ ಮತವನ್ನು ಮಾರಿಕೊಳ್ಳಬಾರದು. ಮತದಾನದಿಂದ ವಂಚಿತರಾಗಬಾರದು ಎಂದರು.

ಉಪನ್ಯಾಸಕರಾದ ಚಂದ್ರನಾಯ್ಕ ಕಾನೂನು ಅರಿವು ಹಾಗೂ ಮತದಾನದ ಜಾಗೃತಿ ಕುರಿತು ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net