ಮತದಾನದಿಂದ ಸುಭದ್ರ ಸರ್ಕಾರ ರಚನೆ ಸಾಧ್ಯ

26 myk
Published on

ಮಾಯಕೊಂಡ: ಸುಭದ್ರ ಸರ್ಕಾರ ರಚಿಸಲು ಪ್ರತಿ ಪ್ರಜೆಯೂ ಮತ ಚಲಾಯಿಸುವ ಮೂಲಕ ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಉಪ ತಹಸಿಲ್ದಾರ್ ರಾಮಸ್ವಾಮಿ ತಿಳಿಸಿದರು.

ಆನಗೋಡು ತರಳುಬಾಳು ವಿದ್ಯಾಸಂಸ್ಥೆಯ ಜಿ. ಚನ್ನಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟೀಯ ಮತದಾರರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಭಾರತವು ವಿಶ್ವದಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನ ಹೊಂದಿದೆ. 18 ವರ್ಷ ಮೇಲ್ಪಟ್ಟವರು ತಪ್ಪದೇ ಮತದಾನ ಮಾಡುವ ಮೂಲಕ ಸಂವಿಧಾನಕ್ಕೆ ಗೌರವ ಸಲ್ಲಿಸಬೇಕು ಎಂದರು.

ಜಾತಿ-ಜನಾಂಗ, ಆಸೆ-ಆಮಿಷಕ್ಕೆ ಒಳಗಾಗದೆ ದಕ್ಷ ಅಭ್ಯರ್ಥಿಗೆ ಮತ ಹಾಕಬೇಕು. ಇತ್ತೀಚಿನ ದಿನಗಳಲ್ಲಿ ಶೇಕಡವಾರು ಮತದಾನದ ಪ್ರಮಾಣ ಇಳಿಕೆಯಾಗುತ್ತಿದೆ, ಜನರುಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ರಾಜಸ್ವ ನಿರೀಕ್ಷಕ ಎನ್. ಎಸ್. ಚಂದ್ರಪ್ಪ, ಗ್ರಾಮಾಡಳಿತ ಅಧಿಕಾರಿ ಮಹಮ್ಮದ್ ಸುಭಾನಿ, ಪ್ರಾಚಾರ್ಯು ಕಾವೇರಿ ಗೌಡರ, ಬಿಎಲ್​ಒ ರುದ್ರೇಶ್ ಸಿದ್ದಪ್ಪ, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net