ಪ್ರತಿಯೊಬ್ಬರೂ ಆರೋಗ್ಯ ಕಾಳಜಿಗೆ ಗಮನ ನೀಡಿ

29M.D.R.4
ಮದ್ದೂರು ತಾಲೂಕಿನ ಗೆಜ್ಜಲಗೆರೆ ಸೂರ್ಯೋದಯ ಕಾನ್ವೆಂಟ್‌ನಲ್ಲಿ ವಿಜ್ಞಾನ ಮೇಳ ಆಯೋಜಿಸಲಾಗಿತ್ತು. ಎಸ್.ಕೆ.ಸುರೇಶ್, ಭಾಗ್ಯಸುರೇಶ್, ನಿರಂಜನ್ ಇದ್ದರು.
Published on

ಮದ್ದೂರು: ಪ್ರತಿಯೊಬ್ಬರಿಗೂ ಆರೋಗ್ಯ ಅತ್ಯವಶ್ಯಕವಾಗಿರುವುದರಿಂದ ಹೆಚ್ಚಿನ ಗಮನ ನೀಡಬೇಕು ಎಂದು ಗೆಜ್ಜಲಗೆರೆ ಸೂರ್ಯೋದಯ ಕಾನ್ವೆಂಟ್ ಮುಖ್ಯಸ್ಥ ಎಸ್.ಕೆ.ಸುರೇಶ್ ಹೇಳಿದರು.

ತಾಲೂಕಿನ ಗೆಜ್ಜಲಗೆರೆ ಸೂರ್ಯೋದಯ ಕಾನ್ವೆಂಟ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ ಮೇಳ ಮತ್ತು ಆರೋಗ್ಯ ಶಿಬಿರದಲ್ಲಿ ಮಾತನಾಡಿ, ಆದ್ದರಿಂದ ಸಂಸ್ಥೆಯಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಕುರಿತು ಹೆಚ್ಚು ತಿಳಿಸಬೇಕು ಎಂಬ ಉದ್ದೇಶದಿಂದ ವಿಜ್ಞಾನ ಮೇಳ ನಡೆಸಲಾಗಿದೆ ಎಂದು ತಿಳಿಸಿದರು.

ಹಲವು ಬಗೆಯ ವಿಜ್ಞಾನ ಮತ್ತು ಗಣಿತದ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿ ಶಿಕ್ಷಕರು ಹಾಗೂ ಪಾಲಕರಿಂದ ಮೆಚ್ಚುಗೆ ಗಳಿಸಿದರು.

ಶ್ರೀಚಾಮುಂಡೇಶ್ವರಿ ಮೆಡಿಕಲ್ ಹಾಸ್ಪಿಟಲ್ ಮತ್ತು ರಿಸರ್ಚ್ ಸಂಸ್ಥೆ ವೈದ್ಯರು ಮಕ್ಕಳ ಆರೋಗ್ಯ ತಪಾಸಣೆ, ದಂತ, ಸ್ತ್ರೀರೋಗ, ಚರ್ಮ ಸೇರಿದಂತೆ ವಿವಿಧ ರೋಗಗಳನನು ತಪಾಸಣೆ ಮಾಡಿದರು. ಸಂಸ್ಥೆಯ ಡಾ.ಸುಹಾಸ್, ಭಾಗ್ಯಾ ಸುರೇಶ್, ನಿರಂಜನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net