

ನವಲಗುಂದ: ಕ್ರೀಡೆ ಕೇವಲ ಸ್ಪರ್ಧೆಗಳಿಗೆ ಮತ್ತು ವಿದ್ಯಾರ್ಥಿ ಜೀವನಕ್ಕೆ ಸೀಮಿತವಾಗದೆ ಎಲ್ಲ ವಯೋಮಾನದವರು ಅದರಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಗುರುಕುಲ ಶಾಲೆಯ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಹೆಗಡೆ ಹೇಳಿದರು.
ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನವಲಗುಂದ -1 ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅರು ಮಾತನಾಡಿದರು.
ಉರ್ದು ಪ್ರೌಢ ಶಾಲೆಯ ಮುಖ್ಯ ಗುರು ದ್ಯಾಮನಗೌಡ ಹುಲ್ಲೂರ್ ಮಾತನಾಡಿ, ವಿದ್ಯಾರ್ಥಿಗಳ ಸತತ ಪ್ರಯತ್ನದ ಮೂಲಕ ಯಶಸ್ಸು ಸಾಧ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ಸಾಧಕರಾಗಬೇಕು ಎಂದರು
ದೈಹಿಕ ಶಿಕ್ಷಣ ಪರೀಕ್ಷಕರಾದ ಎನ್.ಬಿ ಬೀಡಿ, ಸಿಆರ್ಪಿಗಳಾದ ಎಂ.ಎಚ್. ಚಿಕನಾಳ, ಡಿ.ಜೆ. ಹುಲ್ಲೂರ ಇದ್ದರು.