ಎಲ್ಲರೂ ಕನ್ನಡ ಪುಸ್ತಕ ಖರೀದಿಸಿ ಓದಲಿ

5Kittur1
Published on

ಚನ್ನಮ್ಮನ ಕಿತ್ತೂರು: ಕನ್ನಡ ಪುಸ್ತಕಗಳನ್ನು ಕೊಂಡು ಓದುವುದರ ಮೂಲಕ ಕನ್ನಡ ಸಾಹಿತ್ಯ ಮತ್ತು ಭಾಷೆ ಉಳಿಸಿ, ಬೆಳೆಸಲು ಸಾಧ್ಯವಾಗುತ್ತದೆ ಎಂದು ಕಸಾಪ ತಾಲೂಕಾಧ್ಯ ಡಾ.ಎಸ್​.ಬಿ.ದಳವಾಯಿ ಹೇಳಿದರು.

ಪಟ್ಟಣದ ರಾಣಿ ಚನ್ನಮ್ಮ ಮಾಜಿ ಸೈನಿಕರ ೇಮಾಭಿವೃದ್ಧಿ ಸಂದ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್​ನ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್​ ಭಾಷೆ ವ್ಯಾಮೋಹದಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ನಮ್ಮ ಮಾತೃ ಭಾಷೆ ಕನ್ನಡ ಕಡೆಗಣಿಸುವುದು ಮತ್ತು ಕನ್ನಡ ಶಾಲೆಗಳಿಗೆ ಸರ್ಕಾರ ಅಗತ್ಯ ಶಿಕರನ್ನು ನೇಮಿಸದಿರುವುದು ಖೇದಕರ ಸಂಗತಿ ಎಂದರು.

ಮುಖ್ಯಶಿಕ ಬಿ.ಸಿ.ಬಿದರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸತಿಗಳ ಸಂವರ್ಧನೆ ಮತ್ತು ಸಂರಣೆಯ ಆಶಯದಿಂದ 1915 ಮೇ 5ರಂದು ಅಂದಿನ ಮೈಸೂರು ಅರಸ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್​ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಬಿ.ಬಿ.ಕಾದ್ರೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಪ್ರಭಾವತಿ ಲದ್ದಿಮಠ ಮತ್ತು ಸುನಂದಾ ಜೋಶಿ ನಾಡಗೀತೆ ಪ್ರಸ್ತುತಪಡಿಸಿದರು. ಕಿತ್ತೂರು ರಾಣಿ ಚನ್ನಮ್ಮ ಮಾಜಿ ಸೈನಿಕರ ೇಮಾಭಿವೃದ್ಧಿ ಸಂದ ಅಧ್ಯ ಡಾ.ಎಸ್​.ಪಿ.ಹಿರೇಮಠ ಇತರರಿದ್ದರು. ರಾಜಶೇಖರ ರಗಟಿ ಸ್ವಾಗತಿಸಿದರು. ನಾಗಯ್ಯ ಹುಲೆಪ್ಪನವರಮಠ ವಂದಿಸಿದರು. ಗಂಗಾಧರ ಪೂಜೇರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net