ಪ್ರತಿ ಮಂಗಳವಾರ ವಿಶೇಷ ಆರೋಗ್ಯ ಮೇಳ

LNG AYUSH
ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭವ ತಾಲೂಕು ಮಟ್ಟದ ಅಭಿಯಾನ ಕಾರ್ಯಕ್ರಮಕ್ಕೆ ಕರಪತ್ರ ಬಿಡುಗಡೆಗೊಳಿಸಿ ಚಾಲನೆ ನೀಡಲಾಯಿತು. ಗ್ರೇಡ್-2 ತಹಸೀಲ್ದಾರ್ ಬಸವರಾಜ ಝಳಕಿಮಠ, ತಾಪಂ ಇಒ ಅಮರೇಶ ಯಾದವ್, ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ಆರೋಗ್ಯ ಇಲಾಖೆ ವ್ಯವಸ್ಥಾಪಕ ಪ್ರಾಣೇಶ ಜೋಶಿ, ಪುರಸಭೆ ನೈರ್ಮಲ್ಯ ಅಧಿಕಾರಿ ರಾಘವೇಂದ್ರ ಇದ್ದರು.
Published on

ಲಿಂಗಸುಗೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಆಯುಷ್ಮಾನ್ ಭವ ಅಭಿಯಾನ ಉದ್ಘಾಟನೆಯ ನೇರ ಪ್ರಸಾರ ವೀಕ್ಷಣೆ ಮತ್ತು ತಾಲೂಕು ಮಟ್ಟದ ಅಭಿಯಾನ ಕಾರ್ಯಕ್ರಮಕ್ಕೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಕರಪತ್ರ ಬಿಡುಗಡೆಗೊಳಿಸಿ ಚಾಲನೆ ನೀಡಲಾಯಿತು.

ಕಣ್ಣಿನ ಆರೋಗ್ಯ ತಪಾಸಣೆ

ಟಿಎಚ್‌ಒ ಡಾ.ಅಮರೇಶ ಪಾಟೀಲ್ ಮಾತನಾಡಿ, ಆಯುಷ್ಮಾನ್ ಭವ ಅಭಿಯಾನ ಸೆ.17ರಿಂದ ಪ್ರತಿ ಮಂಗಳವಾರ ವಿಶೇಷ ಆರೋಗ್ಯ ಮೇಳ ಹಮ್ಮಿಕೊಂಡು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳು, ಕ್ಷಯ, ಕಣ್ಣಿನ ಆರೋಗ್ಯ ತಪಾಸಣೆ, ದೂರವಾಣಿ ಮೂಲಕ ಆರೋಗ್ಯ ಸಮಾಲೋಚನೆ ನಡೆಸಲಾಗುವುದು.

ಆಯುಷ್ಮಾನ್ ಭಾರತ್ ಐಡಿ ಕಾರ್ಡ್ ರಚನೆ ಮತ್ತು ವಿತರಣೆ, ಮಾನಸಿಕ ಆರೋಗ್ಯ ಸೇವೆ, ಮಕ್ಕಳಿಗೆ ತಪಾಸಣೆ, ಸ್ತ್ರೀರೋಗ ತಪಾಸಣೆ, ಸಮಾಲೋಚನೆ ಮುಂತಾದ ಆರೋಗ್ಯ ಕಾರ್ಯಕ್ರಮಗಳನ್ನು ಮೇಲಧಿಕಾರಿಗಳ ಮಾರ್ಗಸೂಚಿಯಂತೆ ಸೇವೆ ಒದಗಿಸಲಾಗುವುದು ಎಂದರು.


ಸಿಬ್ಬಂದಿ ಚಿದಾನಂದ, ರಂಗನಾಥ, ಹುಚ್ಚಪ್ಪ, ಅಮರೇಶ, ರೇಣುಕಾ, ರವಿ ಬಳಿಗಾರ, ವಸೀಂ ರೆಹಮಾನ್, ಅಂಬಮ್ಮ, ಶಿವಲೀಲಾ ಮೇಟಿ, ಪದ್ಮಾವತಿ, ನೀಲಾಂಬಿಕಾ, ರೋಸ್ ಮೇರಿ, ನಾಗರತ್ನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net