ಪ್ರತಿ ಮಕ್ಕಳು ಸಾಧನೆ ಮಾಡಬೇಕು

Every child should achieve
ಕೂಡಗಿ ಗ್ರಾಮದ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ನೇಹ ಸಮ್ಮೇಳನದಲ್ಲಿ ವಿವಿಧ ಸ್ಪರ್ಧೆಗಳ್ಲಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ದೇವೇಂದ್ರ ಗೋನಾಳ, ಸೋಮು ಸಾಗರ ಮತ್ತಿತರರಿದ್ದಾರೆ.
Published on

ಗೊಳಸಂಗಿ: ಆದರ್ಶವಿಲ್ಲದೆ ಸತ್ತರೆ ಬದುಕಿಗೆ ಅವಮಾನ. ಸಾಧನೆಯಿಲ್ಲದೆ ಸತ್ತರೆ ಸಾವಿಗೆ ಅವಮಾನ. ಪ್ರತಿಯೊಂದು ಮಕ್ಕಳು ಕೂಡಾ ಜೀವನದಲ್ಲಿ ಅಂದುಕೊಂಡ ಸಾಧನೆ ಮಾಡಬೇಕೆಂದು ಉಪನ್ಯಾಸಕ ದೇವೆಂದ್ರ ಗೋನಾಳ ಹೇಳಿದರು.

ಕೋಲಾರ ತಾಲೂಕಿನ ಕೂಡಗಿ ಗ್ರಾಮದ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ವಿದ್ಯಾರ್ಥಿ ಜೀವನವು ಬಂಗಾರದ ಜೀವನ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಲ್ಲದೇ, ಜೀವನದಲ್ಲಿ ಸಾಧನೆ ಮಾಡುವ ಮೂಲಕ ತಂದೆ&ತಾಯಿ ಆಸೆ ಈಡೇರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಸೋಮು ಸಾಗರ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ನಿವೃತ್ತ ಹಿರಿಯ ಲೆಕ್ಕ ಪರಿಶೋಧಕ ಕೆಂಚಪ್ಪ ಕೂಡಗಿ, ಎಸ್​.ಜಿ. ಗುಡದಿನ್ನಿ, ಸಾಹೇಬಗೌಡ ಪಾಟೀಲ, ವೈ.ಕೆ. ಪತ್ತಾರ, ಪ್ರಕಾಶ ತೊರವಿ, ಹಣಮಂತ ಮಸೂತಿ, ಸಂಗನಗೌಡ ಪಾಟೀಲ, ಬಿ.ಬಿ. ಮುತ್ತತ್ತಿ ಮತ್ತಿತರರಿದ್ದರು.

ಶಿಕ್ಷಕಿ ಶೀತಲಗೌಡ ಶಾಲಾ ವರದಿ ವಾಚಿಸಿದರು. ಚೈತ್ರಾ ಪತ್ತಾರ ನಿರೂಪಿಸಿದರು. ಜ್ಯೋತಿಗೌಡ ವಂದಿಸಿಸದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net