

ಬೈಲಹೊಂಗಲ: ಭಾರತೀಯರು ಪ್ರತಿಯೊಂದಕ್ಕೂ ಪೂಜ್ಯ ಭಾವ ತೋರುವುದು ಸಂಸತಿಯ ಪ್ರತಿಕವಾಗಿದ್ದು, ವೈದ್ಯರಲ್ಲೂ ದೇವರನ್ನು ಕಾಣುವ ಪರಂಪರೆ ನಮ್ಮದು ಎಂದು ನೇಗಿಲಯೋಗಿ ರೈತ ಸೇವಾ ಸಂದ ಜಿಲ್ಲಾಧ್ಯ ಶಂಕರ ಬೋಳನ್ನವರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಮಲಪ್ರಭಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಡಾ.ಚಿದಂಬರ ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಆಶೀರ್ವಾದ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ನಿಮಿತ್ತ ನೇಗಿಲ ಯೋಗಿ ರೈತ ಸೇವಾ ಸಂದಿಂದ ಮಂಗಳವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಂಬಿ ಬಂದ ರೋಗಿಗಳನ್ನು ಉಪಚರಿಸಿ, ಆರೋಗ್ಯ, ಪ್ರಾಣ ರಸುವಲ್ಲಿ ವೈದ್ಯರ ಸೇವೆ ಅಪಾರವಾಗಿದೆ. ಮಾರಣಾಂತಿಕ ಕಾಯಿಲೆ ಗುಣಪಡಿಸಿ ಮರುಜನ್ಮ ನೀಡುವ ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಉಪನ್ಯಾಸಕ ರಮೇಶ ಯರಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಕಂಡ ಮಹಾನ್ ವೆದ್ಯ ಡಾ.ಬಿ.ಸಿ.ರಾಯ್ ವೈದ್ಯರ ಸೇವೆಗೆ ನತೆ ತಂದುಕೊಟ್ಟರು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದಣ್ಣವರ, ಡಾ.ಎ.ಎನ್.ಬಾಳಿ, ಡಾ.ರವಿ ಜಕನೂರ, ಡಾ.ಸಾಗರ ಕುಲಕರ್ಣಿ, ಡಾ.ಮಂಜುನಾಥ ಮುದಕನಗೌಡರ ಸೇರಿ ಇತರರನ್ನು ಸನ್ಮಾನಿಸಲಾಯಿತು. ನೇಗಿಲ ಯೋಗಿ ರೈತ ಸೇವಾ ಸಂದ ಸದಸ್ಯರಾದ ಸೋಮಲಿಂಗಪ್ಪ ಮೆಳ್ಳಿಕೇರಿ, ಮಹಾಂತೇಶ ಬೋಳನ್ನವರ, ಜಗದೀಶ ಬೋಳನ್ನವರ, ಅನೀಲ ಗಿರನ್ನವರ, ಬಸವರಾಜ ಜಂಬಗಿ, ಬಾಬು ಸಂಗೊಳ್ಳಿ, ಅದೃಶ್ಯಪ್ಪ ಹುಚ್ಚನ್ನವರ, ಸಂಗಪ್ಪ ಕಾದ್ರೊಳ್ಳಿ, ಕುಬೇಂದ್ರ ಪಿರಗೋಜಿ, ಮಲ್ಲಿಕಾರ್ಜುನ ಬೆಣಕಟ್ಟಿ, ಮಹೇಶ ಬೋಳನ್ನವರ, ಜಗದೀಶ ಲೋಕಾಪುರ ಇತರರಿದ್ದರು.