

ಮುಂಡಗೋಡ: ಕೋವಿಡ್ನ ಮೊದಲ ಮತ್ತು ಎರಡನೇ ಅಲೆಗಳಿಂದ ಈಗಾಗಲೇ ಸಾಕಷ್ಟು ಪಾಠ ಕಲಿತಿದ್ದೇವೆ. ಮುಂದಿನ ದಿನಗಳಲ್ಲಿ 3ನೇ ಅಲೆ ಬರುತ್ತದೆ ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ 3ನೇ ಅಲೆ ಕುರಿತು ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ರೇಷನ್ ಕಿಟ್ಗಳನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪರಿಸ್ಥಿತಿ ತಿಳಿಯಾಗುವವರೆಗೂ ಶಾಲೆಗಳನ್ನು ಆರಂಭ ಮಾಡಬಾರದು ಎಂದು ನಿರ್ಣಯ ಮಾಡಿದ್ದೇವೆ. 1ನೇ ಅಲೆಯಲ್ಲಿ ಹಿರಿಯರನ್ನು ಕಳೆದುಕೊಂಡಿದ್ದೇವು. 2ನೇ ಅಲೆಯಲ್ಲಿ 35-55 ವರ್ಷದೊಳಗಿನ ಜಿಲ್ಲೆಯ 515 ಮಂದಿಗಳನ್ನು ಕಳೆದುಕೊಂಡಿದ್ದೇವೆ. ಈಗ ಕೋವಿಡ್ ಸಾಕಷ್ಟು ಹತೋಟಿಗೆ ಬಂದು ತಲುಪಿದೆ. 3ನೇ ಅಲೆ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಇದಕ್ಕೂ ಮುನ್ನ ಬಾಚಣಕಿ, ನ್ಯಾಸರ್ಗಿ, ಸಾಲಗಾಂವ, ಚಿಗಳ್ಳಿ ಗ್ರಾಮಗಳಲ್ಲಿ ಕಿಟ್ಗಳನ್ನು ವಿತರಿಸಿದರು.
ಜಿ.ಪಂ. ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿದರು. ಜಿ.ಪಂ. ಸದಸ್ಯ ರವಿಗೌಡ ಪಾಟೀಲ, ನಾಗಭೂಷಣ ಹಾವಣಗಿ, ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಬಿಸವಣ್ಣವರ, ನಿಂಗಜ್ಜ ಕೋಣನಕೇರಿ, ಕೆಂಜೋಡಿ ಗಲಬಿ, ಸಿದ್ದು ಹಡಪದ, ವೈ.ಪಿ. ಪಾಟೀಲ, ಸುನೀಲ ವೆರ್ಣೆಕರ, ತುಕಾರಾಮ ಇಂಗಳೆ, ಪರಶುರಾಮ ತಹಶೀಲ್ದಾರ, ದೇವು ಪಾಟೀಲ, ಪ್ರದೀಪ ಚವ್ಹಾಣ ಮತ್ತು ಗ್ರಾ.ಪಂ. ಸದಸ್ಯರು ಇದ್ದರು.