ಎಲ್ಲ ಧರ್ಮಗಳ ಸಾರ ಒಂದೇ

APJ ABDULKAMAM
ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ಯುವಕ ಸಂಘದಿಂದ ಪ್ರವಾದಿ ಮಹಮ್ಮದರ ಜನ್ಮದಿನಾಚರಣೆ ಅಂಗವಾಗಿ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ಸಾಮಾಜಿಕ ಚಿಂತಕ ಆರ್.ಎ.ಚಿಂತನ್ ಉದ್ಘಾಟಿಸಿದರು. ಮುಖ್ಯ ಭಾಷಣಕಾರ ಚಿಕ್ಕಮಗಳೂರಿನ ಅಲ್ತಾಫ್ ಸಖಾಫಿ ಅಲ್ ಮುಯೀನಿ, ಪಂಡಿತ್ ಮೌಲ್ವಿ ಸೈಯದ್ ಬಾಷಾ, ಮುಖಂಡರಾದ ಎಂ.ಮಾಬುಸಾಬ್, ಮಸ್ತೂರ್‌ಅಲಿ, ಮಹಮ್ಮದ್ ಆರೀಫ್, ಮಹಮ್ಮದ್ ಶಫಿ, ಹಂಡಿ ಹಾಶೀಂ, ಶಕ್ಷಾವಲಿ ಇತರರಿದ್ದರು.
Published on

ಸಿರಗುಪ್ಪ: ಸಂವಿಧಾನದ ಆಶಯದಂತೆ ಭಾರತೀಯರೆಲ್ಲರೂ ಒಗ್ಗೂಡಿದರೆ ಮಾತ್ರ ಬಲಿಷ್ಠ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಚಿಂತಕ ಆರ್.ಎ.ಚಿಂತನ್ ಅಭಿಪ್ರಾಯಪಟ್ಟರು.

ಸೌಹಾರ್ದ ಸಂಗಮ ಕಾರ್ಯಕ್ರಮ

ತಾಲೂಕಿನ ತೆಕ್ಕಲಕೋಟೆಯಲ್ಲಿ ಎಪಿಜೆ ಅಬ್ದುಲ್ ಕಲಾಂ ಯುವಕ ಸಂಘದಿಂದ ಪ್ರವಾದಿ ಮಹಮ್ಮದರ ಜನ್ಮದಿನ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸೌಹಾರ್ದ ಸಂಗಮ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಭಾಷಣಕಾರ ಚಿಕ್ಕಮಗಳೂರಿನ ಅಲ್ತಾಫ್ ಸಖಾಫಿ ಅಲ್ ಮುಯೀನಿ ಮಾತನಾಡಿ, ಸಕಲ ಧರ್ಮಗಳ ಸಾರವನ್ನು ಅರಿಯಬೇಕು. ವೇದ, ಖುರಾನ್, ಬೈಬಲ್, ಭಗವದ್ಗೀತೆಯಲ್ಲಿ ವಸುದೇವ ಕುಟುಂಬಕಂ ಎಂದು ಹೇಳಲಾಗಿದೆ. ಜಗತ್ತಿನ ಮನುಷ್ಯರು ನಾವೆಲ್ಲರು ಒಂದೇ ಕುಟುಂಬದ ಸದಸ್ಯರೆನ್ನುವುದು ಎಲ್ಲ ಧರ್ಮಗಳ ಮುಖ್ಯ ಸಾರವಾಗಿದೆ. ಮನುಷ್ಯರಲ್ಲಿ ಭೇದಭಾವ ಇರಬಾರದು ಎಂದರು.

ಪಂಡಿತ್ ಮೌಲ್ವಿ ಸೈಯದ್ ಬಾಷಾ ಮಾತನಾಡಿದರು. ಮುಖಂಡರಾದ ಎಂ.ಮಾಬುಸಾಬ್, ಮಸ್ತೂರ್‌ಅಲಿ, ಮಹಮ್ಮದ್ ಆರೀಫ್, ಮಹಮ್ಮದ್ ಶಫಿ, ಹಂಡಿ ಹಾಶೀಂ, ಶೆಕ್ಷಾವಲಿ, ಎನ್.ಖಾದರ್‌ಬಾಷಾ, ಮುರ್ತುಜಾ ಮತ್ತು ಎ.ಪಿ.ಜೆ.ಅಬ್ದುಲ್ ಕಲಾಂ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net