ರಾಜೀನಾಮೆ ಜತೆಗೆ ಮದುವೆ ಕರೆಯೋಲೆಯನ್ನೂ ಸಿಎಂಗೆ ನೀಡಿದ ಈಶ್ವರಪ್ಪ!

Eshwarappa
Published on

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್​ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಸಂಕಷ್ಟಕ್ಕೆ ಒಳಗಾಗಿರುವ ಬಿಜೆಪಿ ನಾಯಕ ಕೆ.ಎಸ್​. ಈಶ್ವರಪ್ಪ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರು.

ಸಿಎಂ ನಿವಾಸದ ಬಳಿ ಜಮಾಯಿಸಿದ್ದ ಈಶ್ವರಪ್ಪ ಅಭಿಮಾನಿಗಳು ರಾಜೀನಾಮೆ ನೀಡದಂತೆ ಘೋಷಣೆ ಕೂಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಆರಾಮಾಗಿ ಆಗಮಿಸಿದ್ದ ಈಶ್ವರಪ್ಪ ಮುಖ್ಯಮಂತ್ರಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ಈಶ್ವರಪ್ಪ ಅವರು ಒಂದೇ ಒಂದು ವಾಕ್ಯದ ಮೂಲಕ ರಾಜೀನಾಮೆ ಸಲ್ಲಿಸಿದ್ದು, 'ನನ್ನ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ' ಎಂಬುದಷ್ಟೇ ಇರುವ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

ಇನ್ನು ಇದೇ ವೇಳೆ ಇನ್ನೊಂದು ಕೆಲಸವನ್ನೂ ಮಾಡಿರುವ ಈಶ್ವರಪ್ಪ, ತಾವು ರಾಜೀನಾಮೆಯಿಂದ ವಿಚಲಿತಗೊಂಡಿಲ್ಲ, ಕೂಲ್ ಆಗಿಯೇ ಇದ್ದೇನೆ ಎಂಬಂತೆ ಪರೋಕ್ಷ ಸಂದೇಶವನ್ನೂ ವಿರೋಧಪಕ್ಷಗಳಿಗೆ ರವಾನಿಸಿದ್ದಾರೆ. ಅದೇನೆಂದರೆ ಅವರು ತಮ್ಮ ಮೊಮ್ಮಗನ ಮದುವೆಯ ಆಮಂತ್ರಣ ಪತ್ರವನ್ನೂ ಮುಖ್ಯಮಂತ್ರಿಯವರಿಗೆ ಇದೇ ವೇಳೆ ನೀಡಿ, ಮದುವೆಗೆ ಆಹ್ವಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net