

ಅಳವಂಡಿ: ಆರೋಗ್ಯಕರ ಜೀವನ ನಡೆಸಲು ಉತ್ತಮ ಪರಿಸರ ಅವಶ್ಯ. ಆದ್ದರಿಂದ ಗಿಡಮರಗಳನ್ನು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಪ್ರಾಕೃಪಸ ಸಂಘದ ಅಧ್ಯಕ್ಷ ಅಂದಾನಪ್ಪ ಡಂಬಳ ಹೇಳಿದರು.
ಸಮೀಪದ ಘಟ್ಟಿರಡ್ಡಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ಸ್ವಾತಂತ್ರೊೃೀತ್ಸವ ನಿಮಿತ್ತ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ಸಕಲ ಜೀವಿಗಳಿಗೆ ಜೀವನಾಧಾರ. ಇಂದಿನ ಮಕ್ಕಳಿಗೆ ಪರಿಸರ ಸಂರಕ್ಷಣೆ ಮಹತ್ವ ತಿಳಿಸಬೇಕು. ಎಲ್ಲರೂ ಪರಿಸರ ಸಂರಕ್ಷಣೆಗೆ ಒತ್ತುನೀಡಬೇಕು ಎಂದರು.
ಉಪಾಧ್ಯಕ್ಷ ಪ್ರಕಾಶ ಹಳ್ಳಿಗುಡಿ, ನಿರ್ದೆಶಕರಾದ ಉಮೇಶ ಡಂಬಳ, ಪಾರವ್ವ ಗಿರಡ್ಡಿ, ಸುರೇಶ, ಸಿಇಒ ಕಿರಣ ಅಂಗಡಿ, ಮುಖ್ಯಶಿಕ್ಷಕ ಮಹಮದ್‌ರಫಿ, ಅಂಗನವಾಡಿ ಕಾರ್ಯಕರ್ತೆಯರಾದ ಯಂಕಮ್ಮ, ಶಕುಂತಲಾ, ಪ್ರಮುಖರಾದ ಉಮೇಶ, ಕೃಷ್ಣ, ಕಾವ್ಯಾ, ಭರಮಪ್ಪ, ರಣದಪ್ಪ, ಯಲ್ಲವ್ವ, ಸುಜಾತಾ, ಅಯ್ಯಪ್ಪ, ಗಂಗಮ್ಮ ಇತರರಿದ್ದರು.