ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

05-06-rama-parisara1
Published on

*ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಹೇಳಿಕೆ

ರಾಮನಗರ

ನಮ್ಮ ಭವಿಷ್ಯ ಪರಿಸರ ಕಾಳಜಿ ಮೇಲೆಯೇ ನಿಂತಿದ್ದು, ನಾವೆಲ್ಲರನ್ನೂ ನಮ್ಮ ಸುತ್ತ ಮುತ್ತಲ ಪರಿಸರವನ್ನು ಸಂರಕ್ಷಿಸಿಕೊಳ್ಳ ಬೇಕಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಹೇಳಿದರು.

ನಗರದ ಕಂದಾಯ ಭವನದ ಬಳಿ ಪ್ರಾಧಿಕಾರದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನೂರಾರು ಶಾಲಾ ಮಕ್ಕಳಿಗೆ ಸಸಿಗಳ ವಿತರಿಸಿ ಮಾತನಾಡಿ, ಇಂದು ಎಲ್ಲದ್ದಕ್ಕಿಂತ ಪರಿಸರವೇ ಮುಖ್ಯ, ಅಭಿವೃದ್ಧಿ ಜತೆ ಜತೆಗೆ ಪರಿಸರವನ್ನು ಉಳಿಸಿಕೊಂಡು ಹೋಗಬೇಕಿದೆ. ಪರಿಸರವನ್ನು ಕಾಪಾಡಿಕೊಂಡರಷ್ಟೇ ನಮ್ಮ ಭವಿಷ್ಯ ಚೆನ್ನಾಗಿ ಇರಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಸಂರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು ಕರೆ ನೀಡಿದರು.

ಈಗಾಗಲೇ ಅರಣ್ಯ ನಾಶದ ಪರಿಣಾಮಗಳನ್ನು ನಾವು ನೋಡಿದ್ದೇವೆ. ಮತ್ತಷ್ಟು ಅರಣ್ಯ ನಾಶ ನಮ್ಮೆಲ್ಲರ ವಿನಾಶ ಎನ್ನುವ ಎಚ್ಚರಿಕೆ ಇರಬೇಕು. ಅಭಿವೃದ್ಧಿ ಅನಿವಾರ್ಯವಾದರೂ, ಪರಿಸರದ ಜತೆಗೆ ನಾವು ಅಭಿವೃದ್ಧಿಯನ್ನು ಮಾಡಬೇಕಿದೆ. ಇಲ್ಲವಾದರೆ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿ ಪರಿಸರ ಕಾಳಜಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಇಕ್ಬಾಲ್ ಹುಸೇನ್, ರಾಮನಗರ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಜಿಬಿಡಿಎ ಸದಸ್ಯರಾದ ಎನ್.ನರಸಿಂಹಯ್ಯ, ರಮೇಶ್, ಪುಟ್ಟರಾಜು, ಕಲ್ಯಾಣ ಕುಮಾರಿ, ಪ್ರಾಧಿಕಾರದ ಸಹಾಯಕ ಆಯುಕ್ತ ಮಾರುತಿ ಪ್ರಸನ್ನ, ತಹಸೀಲ್ದಾರ್ ಚೇತನ ಎಸ್, ಪ್ರದೀಪ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಸತೀಶ್, ಶಿವಸ್ವಾಮಿ, ಸಹಕಾರ ಇಲಾಖೆ ಉಪ ನಿಬಂಧಕಿ ಕವಿತಾ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net