ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ

hbr
Published on

ಹೆಬ್ರಿ: ವನ್ಯಜೀವಿ, ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜನರಿಗೆ ಜಾಗೃತಿ ಮೂಡಿಸಲು ಸ್ವಚ್ಛತೆ ನಡೆಸುತ್ತಿದ್ದೇವೆ. ಇಂದು ಒಂದು ಟನ್‌ಗಳಷ್ಟು ಪ್ಲಾಸ್ಟಿಕ್, ಇನ್ನಿತರ ತ್ಯಾಜ್ಯ ಸಿಕ್ಕಿದೆ. ಎಲ್ಲೆಂದರಲ್ಲಿ ಕಸ ಎಸೆಯದೆ ಪರಿಸರ ಉಳಿಸಿ ಎಂದು ಸೋಮೇಶ್ವರ ವನ್ಯಜೀವಿ ವಲಯ, ಹೆಬ್ರಿ ಇದರ ಆರ್.ಎ್.ಒ ಚಿದಾನಂದಪ್ಪ ಜಿ.ಹೇಳಿದರು. 71ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಸೋಮೇಶ್ವರ ವನ್ಯಜೀವಿ ವಲಯ ಹೆಬ್ರಿ, ಚಾರ-ಬೆಳಂಜೆ ಶೌರ್ಯ ವಿಪತ್ತು ನಿರ್ವಹಣಾ, ಸರ್ಕಾರಿ ಪದವಿ ಕಾಲೇಜು ಹೆಬ್ರಿಯ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ವಿದ್ಯಾರ್ಥಿಗಳ ಸಹಯೋಗದಲ್ಲಿ ಸೋಮೇಶ್ವರದಿಂದ ಹೆಬ್ರಿಯ ತನಕ ನಡೆದ ಸ್ವಚ್ಛತೆಯ ನೇತೃತ್ವ ವಹಿಸಿ ಮಾತನಾಡಿದರು. ಡಿ.ಆರ್.ಎ್.ಒ ಗಳಾದ ಮನೋಜ್ ಕುಮಾರ್, ಜಯಕುಮಾರ್, ಎನ್.ಎಸ್.ಎಸ್ ಯೋಜನಾಧಿಕಾರಿ ಪ್ರವೀಣ್ ಶೆಟ್ಟಿ, ಶೌರ್ಯ ತಂಡದ ಸದಸ್ಯರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net