ಪರಿಸರ ಮಾರಕ ವಸ್ತುಗಳ ಬಳಕೆ ಬೇಡ

FotoJet (1)
Published on

ಎಡಿಸಿ ಭಾಸ್ಕರ್ ಅಭಿಮತ ಚಿಕ್ಕಬಳ್ಳಾಪುರದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ

ಚಿಕ್ಕಬಳ್ಳಾಪುರ: ಅನಾರೋಗ್ಯಕರ ವಾತಾವರಣದಲ್ಲಿ ಸಮಸ್ಯೆಗಳ ಪ್ರಮಾಣ ಹೆಚ್ಚಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್ ಅಭಿಪ್ರಾಯಪಟ್ಟರು.

ನಗರದ ಸೇಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸೋಮವಾರ ಹಮ್ಮಿಕೊಂಡಿದ್ದ ವಾಯುವಾಲಿನ್ಯ ನಿಯಂತ್ರಣ ವಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಾಯುವಾಲಿನ್ಯ ನಿಯಂತ್ರಣಕ್ಕಾಗಿ ಪರಿಸರಸ್ನೇಹಿ ವಾರ್ಗೋಪಾಯಗಳ ಬಗ್ಗೆ ತಿಳಿದುಕೊಂಡು ಪಾಲಿಸಬೇಕು. ಇಲ್ಲದಿದ್ದಲ್ಲಿ ಆರೋಗ್ಯಕರ ಜೀವನ ಸಾಧ್ಯವಾಗುವುದಿಲ್ಲ. ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಜಿಲ್ಲೆಯನ್ನು ಪ್ಲಾಸ್ಟಿಕ್‌ಮುಕ್ತಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಅಂಗಡಿ, ಹೋಟೆಲ್, ಪ್ಲಾಸ್ಟಿಕ್ ವಾರಾಟ ಮಳಿಗೆಗಳ ಮೇಲೆ ದಾಳಿ, ದಂಡ ವಿಧಿಸಲಾಗುತ್ತಿದೆ. ಹಾಗೆಯೇ ಸಾರ್ವಜನಿಕರು ಸಹ ಮಾರಕ ಉತ್ಪನ್ನಗಳ ಬಳಕೆಯನ್ನು ಬಿಡಬೇಕು ಎಂದರು.

ಪಠ್ಯಪುಸ್ತಕಗಳಲ್ಲಿ ವಾಯು, ಜಲ, ಮಣ್ಣು ಹಾಗೂ ಇತರ ವಾಲಿನ್ಯಗಳ ಕುರಿತು ವಾಹಿತಿ ಇದೆ. ಇದನ್ನು ಅರ್ಥೈಸಿಕೊಳ್ಳುವುದರ ಜತೆಗೆ ಪರಿಹಾರ ಕ್ರಮಗಳನ್ನು ಪಾಲಿಸಬೇಕು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಎ. ವಿವೇಕಾನಂದ ವಾತನಾಡಿ, 18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುವಂತಿಲ್ಲ. ಒಂದು ವೇಳೆ ಪಾಲಕರು ಅವಕಾಶ ನೀಡಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮೋಟಾರ್ ವಾಹನ ನಿರೀಕ್ಷಕಿ ಅರುಣಾ ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ ಶೇ.24ರಷ್ಟು ಮಾಲಿನ್ಯ

ಜಿಲ್ಲೆಯಲ್ಲಿ ವಾಹನಗಳಿಂದ ಶೇ.24ರಷ್ಟು ವಾಯುವಾಲಿನ್ಯ ಉಂಟಾಗಿದೆ. ಇದರ ಪ್ರಮಾಣವು ಮುಂದಿನ ದಿನಗಳಲ್ಲಿ ತುಂಬಾ ಕಡಿಮೆಯಾಗಬೇಕು. ಇದಕ್ಕೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದರು.

ಜಾಗೃತಿ

ವಾಯುವಾಲಿನ್ಯದಿಂದ ಉಂಟಾಗುವ ಹದ್ರೋಗ ಮತ್ತು ಪಾರ್ಶ್ವವಾಯು, ಶ್ವಾಸಕೋಶ ಕ್ಯಾನ್ಸರ್, ಉಸಿರಾಟದ ಸೋಂಕುಗಳು, ವಾಹನಗಳಲ್ಲಿ ಪೆಟ್ರೋಲ್, ಡೀಸೆಲ್ ಬಳಸುವುದರಿಂದ ಕಾರ್ಬನ್ ಡೈ ಆಕೈ ್ಸಡ್ ಹೊಗೆ ಉತ್ಪತ್ತಿ, ಸಮೂಹ ಸಾರಿಗೆಯ ಬಳಕೆ, ಪ್ಲಾಸ್ಟಿಕ್ ಬದಲಿಗೆ ಪರ್ಯಾಯ ವಸ್ತುಗಳ ಬಳಕೆ, ಸುಗಮ ಸಂಚಾರ ವ್ಯವಸ್ಥೆಯ ಬಗ್ಗೆ ಹಿರಿಯ ಮೋಟಾರ್ ವಾಹನ ನೀರಿಕ್ಷಕ ನಾಗರಾಜ್ ನಾಯಕ್ ಮಾಹಿತಿ ನೀಡಿದರು.

ಭಿತ್ತಿಪತ್ರಗಳ ಬಿಡುಗಡೆ

ವಾಯುವಾಲಿನ್ಯ ನಿಯಂತ್ರಣ ಜಾಗತಿ ಮೂಡಿಸುವ ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಪರಿಸರಸ್ನೇಹಿ ಸಾರಿಗೆ, ಶಕ್ತಿ ಸಮರ್ಥ ಮನೆಗಳು, ವಿದ್ಯುತ್ ಉತ್ಪಾದನೆ, ಉದ್ಯಮ ನಿಯಂತ್ರಣ, ಶುದ್ಧ ಇಂಧನ ಮತ್ತು ತಂತ್ರಜ್ಞಾನಗಳ ಬಳಕೆ ಮತ್ತು ಉತ್ತಮ ತ್ಯಾಜ್ಯ ನಿರ್ವಹಣೆಯನ್ನು ಬೆಂಬಲಿಸುವ ನೀತಿಗಳು ಮತ್ತು ಹೂಡಿಕೆಗಳು ಸೇರಿ ವಿವಿಧ ವಿಚಾರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net