ಪರಿಸರ ಜಾಗೃತಿ ಕಾರ್ಯಾಗಾರ

kota (8)
Published on

ಕೋಟ: ಪ್ರಕೃತಿಯನ್ನು ಪ್ರೀತಿಸುವ ಮನೋಭಾವನೆ ಎಳೆ ವಯಸ್ಸಿನಲ್ಲೇ ಮೂಡಬೇಕು ಆಗ ಪರಿಸರ ಉಳಿಯಲು ಸಾಧ್ಯ ಎಂದು ಪರಿಸರವಾದಿ ಪ್ರಸಾದ್ ಬೈಂದೂರು ಅಭಿಪ್ರಾಯಪಟ್ಟರು.

ಕೋಟದ ಪಂಚವರ್ಣ ಮಹಿಳಾ ಮಂಡಲದ ಆಶ್ರಯದಲ್ಲಿ ಕೋಟೇಶ್ವರದ ಹೊಸಬಡಾಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕುಂದಾಪುರ ಸೇವಾ ಸಂಗಮ ಶಿಶು ಮಂದಿರ ವಿಶ್ವಸ್ಥ ಮಂಡಳಿಯ ಪ್ರಮುಖರಾದ ಚಂದ್ರಿಕಾ ಚಂದ್ರಮೋಹನ್ ಉದ್ಘಾಟಿಸಿದರು. ಪಂಚವರ್ಣದ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪರಿಸರ ಜಾಗೃತಿಯ ಪ್ರತಿಜ್ಞಾ ವಿಧಿ ಭೋದಿಸಿದರು. ಅಧ್ಯಕ್ಷತೆಯನ್ನು ಪಂಚವರ್ಣದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕಿ ಪದ್ಮಾವತಿ ಕೆ., ಕೋಟೇಶ್ವರ ಗ್ರಾಪಂ ಸದಸ್ಯೆ ಆಶಾ ಇದ್ದರು. ಸಹ ಶಿಕ್ಷಕಿ ಕಮಲಾ ಟಿ.ವಿ. ವಂದಿಸಿದರು. ಮಹೇಶ್ ಹವಲ್ದಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net