ಉಡುಪಿಯಲ್ಲಿ ಜು.19ರಂದು ದಿಗ್ಗಜರಿಂದ ಯಕ್ಷಗಾನ ಪ್ರದರ್ಶನ...

Yakshagana 1
Published on

ಕಲಾವಿದ ವಿದ್ಯಾಧರ ರಾವ್​ಗೆ ಯಕ್ಷ ಸಾಧಕ ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಯಕ್ಷಗಾನ ಕೇಂದ್ರ ಇಂದ್ರಾಳಿ, ಜಿ.ಶಂಕರ ಫ್ಯಾಮಿಲಿ ಟ್ರಸ್ಟ್​ ಅಂಬಲಪಾಡಿ ಹಾಗೂ ಉಜ್ವಲ ಡೆವಲಪರ್ಸ್​ ಉಡುಪಿ ಆಶ್ರಯದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್​ (ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ ಸ್ಮರಣಾರ್ಥ ಬಡಗುತಿಟ್ಟು ಯಕ್ಷಗಾನ ಖ್ಯಾತ ಕಲಾವಿದ ವಿದ್ಯಾಧರ ರಾವ್​ ಜಲವಳ್ಳಿ ಅವರಿಗೆ ಯಕ್ಷ ಸಾಧಕ ಪ್ರಶಸ್ತಿ ನೀಡಲಾಗುತ್ತಿದೆ.

ಜು.19ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಪುರಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿ ಪ್ರದಾನದ ಬಳಿಕ ಯಕ್ಷಗಾನದ ದಿಗ್ಗಜ ಕಲಾವಿದರಿಂದ ಕೃಷ್ಣಾರ್ಜುನ ಕಾಳಗ ಹಾಗೂ ರಾಜಾ ಭದ್ರಸೇನ ಪ್ರದರ್ಶನಗೊಳ್ಳಲಿದೆ.

Yakshagana 2
ವಿದ್ಯಾಧರ

ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್​ ಜನ್ಸಾಲೆ, ಚಂಡೆ- ಪ್ರಜ್ವಲ ಮುಂಡಾಡಿ, ಮದ್ದಳೆ- ಶಶಾಂಕ ಆಚಾರ್ಯ ಕಿರಿಮಂಜೇಶ್ವರ ಪಾಲ್ಗೊಳ್ಳಲಿದ್ದಾರೆ. ಕೃಷ್ಣಾರ್ಜುನ ಕಾಳಗದ ಮುಮ್ಮೇಳದಲ್ಲಿ ಅರ್ಜುನನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣ- ನೀಲ್ಕೋಡು ಶಂಕರ ಹೆಗಡೆ, ಸುಭದ್ರೆ- ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ದಾರುಕ- ರವೀಂದ್ರ ದೇವಾಡಿಗ, ಅಭಿಮನ್ಯು- ಚಂದ್ರಹಾಸ ಗೌಡ ಹೊಸಪಟ್ನ, ಭೀಮ- ಕೆ.ಜಿ.ಕಾರ್ತಿಕ, ರುಕ್ಮಿಣಿ- ಸುಧೀರ ಉಪ್ಪೂರು. ರಾಜಾ ಭದ್ರಸೇನ ಮುಮ್ಮೇಳದಲ್ಲಿ ಭದ್ರಸೇನನಾಗಿ ವಿದ್ಯಾಧರ ರಾವ್​ ಜಲವಳ್ಳಿ, ದೃಢವರ್ಮ- ಕಾರ್ತಿಕ ಕಣ್ಣಿಮನೆ, ವತ್ಸಾಖ್ಯ- ಉದಯ ಹೆಗಡೆ ಕಡಬಾಳ, ವಿದ್ಯುಲ್ಲೋಚನ- ಪವನಕುಮಾರ್​ ಸಾನ್ಮನೆ, ರತ್ನಾವತಿ- ಸಂತೋಷ ಹಿಲಿಯಾಣ ಪಾತ್ರ ನಿರ್ವಹಿಸಲಿದ್ದಾರೆ ಎಂದು ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net