

ಹಗರಿಬೊಮ್ಮನಹಳ್ಳಿ: ತಾಲೂಕಿನ ಮೋರಗೆರೆಯಲ್ಲಿ ಆಸರೆ ಮತ್ತು ಗ್ರಾಮ ವಿಕಾಸ, ಗ್ರಾಪಂ, ತಾಪಂನಿಂದ ಹವಮಾನ ಬದಲಾವಣೆ ಪರಿಣಾಮ ತಡೆಗೆ ಜಾಗೃತಿ ಅಭಿಯಾನ ಕಾರ್ಯಕ್ರಮ ಶನಿವಾರ ನಡೆಯಿತು.
ಇದನ್ನೂ ಓದಿ: ಪರಿಸರ ರಕ್ಷಣೆ ಕರ್ತವ್ಯ ಸಂವಿಧಾನದಲ್ಲೇ ಅಡಕ
ಸಂಪನ್ಮೂಲ ವ್ಯಕ್ತಿಯಾದ ಮಮತಾ ತಳವಾರ ಮಾತನಾಡಿ, ಪರಿಸರ ನಾಶದಿಂದ ಹವಮಾನದಲ್ಲಿ ಬಾರಿ ಬದಲಾವಣೆಯಾಗಿದೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತಿದ್ದು, ಇದನ್ನು ತಡೆಯುವಲ್ಲಿ ಪ್ರತಿಯೊಬ್ಬರ ಕರ್ತವ್ಯ ಇದೆ. ಆದ್ದರಿಂದ ಜಾಗೃತರಾಗಿ ಪರಿಸರ ಉಳಿಸಿಕೊಳ್ಳುವ ಯತ್ನ ಮಾಡೋಣವೆಂದರು.
ಗ್ರಾ.ಪಂ.ಸದಸ್ಯರಾದ ನೀಲನಗೌಡ್ರು ಮಹೇಶ್ವರಗೌಡ, ಕುಂಟೂರು ನಾಗರಾಜ, ಟಿ.ಜಿ.ಶ್ರೀಧರ, ಲಂಗಟದರ ಗಿರಿಜಮ್ಮ, ಅಟವಾಳಗಿ ನಿರ್ಮಲ, ವಿಎಸ್‌ಎಸ್‌ಎನ್ ಅಧ್ಯಕ್ಷ ಕುಂಟೂರು ಸೋಮಶೇಖರ, ಹಾಲು ಒಕ್ಕೂಟ ನಿರ್ದೇಶಕ ಹಳ್ಳಿ ಮಲ್ಲಿಕಾರ್ಜುನ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶೋಭಾ ಜೈನ್, ಸಂಪನ್ಮೂಲ ವ್ಯಕ್ತಿ ಲೋಕೇಶ ಹೊಳಗುಂದಿ ಇತರರಿದ್ದರು.