ಪ್ರತಿ ಜೀವರಾಶಿಗೂ ಪರಿಸರ ಅಮೂಲ್ಯ ಕೊಡುಗೆ

17 RTL -2
Published on

ರಟ್ಟಿಹಳ್ಳಿ: ಪರಿಸರ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಅರಣ್ಯ ಇಲಾಖೆಯ ಕರ್ತವ್ಯವಲ್ಲ. ಪ್ರತಿ ಜೀವರಾಶಿಗೂ ಪರಿಸರ ಅಮೂಲ್ಯ ಕೊಡುಗೆಯಾಗಿದೆ. ಗಾಳಿ, ನೀರು, ಮಣ್ಣು, ಮರಗಿಡ, ಕಾಡು ಇತ್ಯಾದಿ ಪರಿಸರದಲ್ಲಿ ಬಹಳ ಮುಖ್ಯಪಾತ್ರ ವಹಿಸುತ್ತವೆ ಎಂದು ಎಸ್​ಡಿಎಂಸಿ ಅಧ್ಯಕ್ಷ ಕರಿಯಪ್ಪ ಚೌಡಕ್ಕನವರ ಹೇಳಿದರು.

ತಾಲೂಕಿನ ಕುಡಪಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮ ಹಾಗೂ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಸ್ವಾರ್ಥಕ್ಕಾಗಿ ಗಿಡ ಮರಗಳನ್ನು ನಾಶಮಾಡುತ್ತಿದ್ದು, ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಪರಿಸರವನ್ನು ರಕ್ಷಣೆ ಮಾಡದಿದ್ದರೆ ಮುಂದೆ ದೊಡ್ಡ ಅಪಾಯವಾಗುತ್ತದೆ ಎಂದರು.

ದೊಡ್ಡಗುಬ್ಬಿ ಸಿಆರ್​ಪಿ ಚೇತನಕುಮಾರ ಬಣಕಾರ ಮಾತನಾಡಿ, ಪರಿಸರವೆಂಬುದು ಪ್ರಾಣಿ, ಪಕ್ಷಿ, ಮನುಷ್ಯರಿಗೂ ಅವಶ್ಯವಾಗಿ ಬೇಕು. ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.

ಎಸ್​ಡಿಎಂಸಿ ಉಪಾಧ್ಯಕ್ಷೆ ಹುಲಿಗೆಮ್ಮ ಚಿನ್ನಿಕಟ್ಟಿ, ಸದಸ್ಯರಾದ ಪ್ರಭು ಮರಾಠ, ಪ್ರಿಯಾಂಕ ಕುಸಗೂರು, ಬಸವರಾಜ ಹರಪನಹಳ್ಳಿ, ಬಸಮ್ಮ ಸೊಂಡೇರ, ಹನುಮಂತಗೌಡ ಸಣ್ಣದ್ಯಾವಣ್ಣನವರ, ಕವಿತಾ ಡಮ್ಮಳ್ಳಿ, ಕವಿತಾ ಕೆರಕನವರ, ವನಿತಾ ಕುಸಗೂರು, ರಿಯಾನ್ ದೊಡ್ಡಮನಿ, ಪ್ರಭಾವತಿ ಚಿಗ್ಗೌಡ್ರ, ಶರೀಫಸಾಬ್ ದೊಡ್ಡಮನಿ, ಬಸವರಾಜ ಕುಸಗೂರು, ಮುಖ್ಯ ಶಿಕ್ಷಕರಾದ ಜಿ.ಎಂ. ಮೆಣಸಿನಕಾಯಿ, ಎಂ.ಆರ್. ಮರಿಗೌಡ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net