

ಬೈಲಹೊಂಗಲ: ಸನಾತನ ಧರ್ಮದ ಕಲೆ ಹಾಗೂ ಸ್ಥಳಿಯ ಕಲಾವಿದರನ್ನು ಪೋಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಪುರಸಭೆ ಅಧ್ಯ ವಿಜಯ ಬೋಳಣ್ಣವರ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಗಣೇಶ ಹಬ್ಬದ ನಿಮಿತ್ತ ಮಣ್ಣಿನ ಗಣೇಶ ಮೂರ್ತಿ ತಯಾರಕರ, ಮಾರಾಟಗಾರರ ಹಾಗೂ ಸಾರ್ವಜನಿಕ ಗಣೇಶ ಮಂಡಳದವರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ಮಾತನಾಡಿ, ಸಾರ್ವಜನಿಕ ಮಂಡಳದವರು ಪಿಒಪಿ ಮೂರ್ತಿ ಪ್ರತಿಷ್ಠಾಪಿಸಬಾರದು ಎಂದರು.
ಸಿಪಿಐ ಪ್ರಮೋದ ಯಲಿಗಾರ, ಆರ್ಟಿಒ ಅಧಿಕಾರಿ ಅನಿಲಕುಮಾರ ಪಾತ್ರೂಟ ಮಾತನಾಡಿದರು.ಗಣೇಶ ಮೂರ್ತಿಕಾರರ ೇಮಾಭಿವದ್ಧಿ ಸಂದ ಅಧ್ಯ ರಾಜು ಬಡಿಗೇರ ಮಾತನಾಡಿ, ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಪಿಒಪಿ ಗಣೇಶ ಮೂರ್ತಿ ಬಳಕೆ ನಿಷೇಧಿಸಿ, ಸ್ಥಳಿಯರಿಗೆ ನೆರವಾಗಬೇಕು ಎಂದರು.
ಮಲ್ಲಿಕಾರ್ಜುನ ಆನಿಗೋಳ , ಮೂರ್ತಿಕಾರರಾದ ವಿ.ಕೆ.ಬಡಿಗೇರ, ಅರವಿಂದ ಪತ್ತಾರ, ಬಿ.ಎಂ. ಪತ್ತಾರ, ರಾಮಕಷ್ಣ ಬಡಿಗೇರ, ಪವನ ಬಡಿಗೇರ, ಮಂಜುನಾಥ ಕಮ್ಮಾರ, ಮೋಹನ ಚವ್ಹಾನ, ಈಶ್ವರ ಕಂಚಗಾರ, ಈರಪ್ಪ ಬಡಿಗೇರ, ಪುರಸಭೆ ಉಪಾಧ್ಯ ಬುಡ್ಡೇಸಾಬ ಶಿರಸಂಗಿ, ಹಿರಿಯ ಆರೋಗ್ಯಾಧಿಕಾರಿ ಸುರೇಶ ಪಾಟೀಲ ಇತರರು ಇದ್ದರು.