ಪರಿಸರ ಸ್ನೇಹಿ ಗಣಪ ಪ್ರತಿಷ್ಠಾಪಿಸಿ

HUN-SEP-6-2(ROTARY CLUB PROGRAMME)
Published on

ಹುಣಸೂರು: ಹುಣಸೂರು ನಗರಸಭೆ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಪರಿಸರ ಸ್ನೇಹಿ ಗಣಪ ಪ್ರತಿಷ್ಠಾಪನೆ ಕುರಿತು ಜಾಥಾ ಹಮ್ಮಿಕೊಳ್ಳಲಾಗಿತ್ತು. ನಗರದ ಜೆಎಲ್‌ಬಿ ರಸ್ತೆ, ಬಜಾರ್ ರಸ್ತೆಗಳಲ್ಲಿ ರೋಟರಿ ಸದಸ್ಯರು ಮಣ್ಣಿನ ಗಣಪನ ಮೂರ್ತಿಯನ್ನು ಬಳಸಬೇಕೆಂದು ನಾಗರಿಕರಲ್ಲಿ ಅರಿವು ಮೂಡಿಸಿದರು.


ರೋಟರಿ ಅಧ್ಯಕ್ಷ ಡಾ.ಕೆ.ಪಿ.ಪ್ರಸನ್ನ ಮಾತನಾಡಿ, ನಗರಸಭೆ ಸಹಯೋಗದಲ್ಲಿ ಜನರಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ವಿಗ್ರಹಗಳಿಂದಾಗುವ ಪರಿಸರ ಹಾನಿ ಕುರಿತು ಅರಿವು ಮೂಡಿಸಲಾಗುತ್ತಿದೆ. ಸಂತೋಷದ ಸಂಗತಿಯೆಂದರೆ ನಗರದಲ್ಲಿ ನಗರಸಭೆ ಅಧಿಕಾರಿಗಳ ಕಾಳಜಿಯಿಂದಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿರುವ ಗಣಪತಿ ವಿಗ್ರಹ ಎಲ್ಲೂ ಮಾರಾಟವಾಗುತ್ತಿಲ್ಲ. ಜನರು ಕೂಡ ಮಣ್ಣಿನ ಗಣಪನ ವಿಗ್ರಹಕ್ಕೆ ಆದ್ಯತೆ ನೀಡುವತ್ತ ಗಮನಹರಿಸಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.


ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್ ಮಾತನಾಡಿ, ರಾಸಾಯನಿಕ ಬಣ್ಣಲೇಪಿತ ವಿಗ್ರಹಗಳ ಬಳಕೆ ನಿಷೇಧಿಸಲಾಗಿದೆ. ಗರಿಷ್ಠ 5 ಅಡಿ ಎತ್ತರದ ಗಣಪತಿ ವಿಗ್ರಹಗಳ ಪೂಜೆ ಮತ್ತು ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ನೀಡಿದೆ. ನಗರದ ಮೀನುಗಾರಿಕೆ ಇಲಾಖೆ ಆವರಣದಲ್ಲಿರುವ ಹೊಂಡಗಳಲ್ಲಿ ಗಣೇಶ ವಿಸರ್ಜನೆಗೆ ಅನುಕೂಲವಾಗುವಂತೆ ನಗರಸಭೆ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಗರಿಕರು ಇಲ್ಲಿಯೇ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕೆಂದು ಕೋರಿದರು.


ರೋಟರಿ ನಿಕಟಪೂರ್ವ ಅಧ್ಯಕ್ಷ ಚನ್ನಕೇಶವ, ಶ್ಯಾಮ್, ಶಿವಕುಮಾರ್ ವಿ.ರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net