ಹೊಸವರ್ಷಾಚರಣೆ ಸಂಗಮಕ್ಕೆ ಪ್ರವೇಶ ನಿಷೇಧ?

sangama
Published on

ರಾಮನಗರ: ಪ್ರವಾಸಿಗ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾದ ಕನಕಪುರ ತಾಲೂಕಿನ ಸಂಗಮ ಮತ್ತು ಮೇಕುದಾಟು ಡಿ.31 ಮತ್ತು ಜ.01ರಂದು ಸಾರ್ವಜನಿಕರಿಗೆ ಬಂದ್ ಆಗಲಿವೆ.

ಈ ಸಂಬಂಧ ವಿಜಯವಾಣಿಯೊಂದಿಗೆ ಮಾತನಾಡಿದ ರಾಮನಗರ ಜಿಲ್ಲೆ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಸಂಗಮ ಪ್ರವೇಶಕ್ಕೆ ನಿಷೇಧ ಹೇರಲಾಗುತ್ತಿದೆ ಎಂದು ತಿಳಿಸಿದರು. ಇದರೊಂದಿಗೆ ಡಿ.31ರಂದು ಮತ್ತು ಜ.1ರಂದು ಸಂಗಮ ಮತ್ತು ಮೇಕೆದಾಟಿಗೆ ತೆರಳಿ ಮೋಜು ಮಸ್ತಿ ಮಾಡುವ ಪ್ರವಾಸಿಗರಿಗೆ ನಿರಾಸೆ ಆಗಿದೆ.

ಅತ್ತಕಡೆ ಮಂಡ್ಯ ಜಿಲ್ಲಾಢಳಿತ ಕೂಡ ಕಾವೇರಿ ವನ್ಯ ಜೀವಿಧಾಮ ವ್ಯಾಪ್ತಿಯ ಮುತ್ತಿತ್ತಿಯಲ್ಲಿಯೂ ಸಹ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ.

ಮತ್ತೊಂದೆಡೆ ಅರಣ್ಯ ಇಲಾಖೆ ವ್ಯಾಪ್ತಿಯ ವಿಶ್ರಾಂತಿ ಗೃಹಗಳ ಬುಕ್ಕಿಂಗ್ ಅನ್ನು ಸಹ ಈ ಎರಡೂ ದಿನಗಳು ಬಂದ್ ಮಾಡಲಾಗಿದೆ. ಒಟ್ಟಾರೆ ಈ ಬಾರಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಯಾವುದೇ ಪ್ರದೇಶ ಹೊಸ ವರ್ಷಾಚರಣೆಗೆ ಮುಕ್ತವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net