ಮನರಂಜಿಸಿದ ಸುಧನ್ವಮೋಕ್ಷ ಯಕ್ಷಗಾನ

7sdp1
Published on

ಸಿದ್ದಾಪುರ: ತಾಲೂಕಿನ ಮಂಡ್ಲಿಕೊಪ್ಪದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ ಯಕ್ಷಚಂದನ ದಂಟಕಲ್ ಅವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ‘ಸುಧನ್ವಮೋಕ್ಷ’ ಯಕ್ಷಗಾನ ಪ್ರದರ್ಶನಗೊಂಡು ಮನರಂಜಿಸಿತು.

ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಶ್ರೀಪತಿ ಹೆಗಡೆ ಕಂಚಿಮನೆ, ನಾಗರಾಜ ನಾಯ್ಕ, ರಘುಪತಿ ಹೆಗಡೆ ಹೂಡೇಹದ್ದ ಸಹಕರಿಸಿದರು. ಮುಮ್ಮೇಳದಲ್ಲಿ ನರೇಂದ್ರ ಹೆಗಡೆ ಅತ್ತಿಮುರಡು (ಅರ್ಜುನ), ನಿತಿನ್ ದಂಟಕಲ್ (ಸುಧನ್ವ), ಕಾರ್ತಿಕ ಹೆಗಡೆ ದಂಟಕಲ್ (ಕೃಷ್ಣ), ಮೈತ್ರಿ ಸಂಪೇಸರ (ಪ್ರಭಾವತಿ) ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net