

ಬ್ರಹ್ಮಾವರ: ರಾಜ್ಯ ಸರ್ಕಾರವು ಸೆ.7ರಿಂದ ಪ್ರಾರಂಭಿಸಲಿರುವ ಜಾತಿವಾರು ಜನಸಂಖ್ಯಾ ಗಣತಿ 2025ರ ಗಣತಿಯಲ್ಲಿ ನಾನಾ ಉಪನಾಮಗಳಿಂದ ಇರುವ ದೇವಾಡಿಗರು ದೇವಾಡಿಗ ಎಂದು ನಮೂದಿಸುವಂತೆ ಬಾರಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿರುವ ಕೇಂದ್ರ ಸಂಸ್ಥೆ ವಿಶ್ವ ದೇವಾಡಿಗ ಮಹಾ ಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಮೋಹನ ದಾಸ್ ಹಿರಿಯಡ್ಕ ತಿಳಿಸಿದ್ದಾರೆ.
ದೇವಾಡಿಗ ಸಮಾಜವು ಹಿಂದುಳಿದ ಸಮಾಜವೆಂದು ಪರಿಗಣಿಸಿದ್ದರೂ ಸರ್ಕಾರದಿಂದ ಸಿಗಬೇಕಾದ ಮೀಸಲಾತಿಯ ಸವಲತ್ತುಗಳು ಸಿಗದೇ ಇರುವುದು ಮತ್ತು ಸಮಾಜದ ಜನಸಂಖ್ಯೆ ವಿವರ ಬಹಳಷ್ಟು ತಪ್ಪಾಗಿ ವರ್ಗೀಕರಿಸಿದ್ದು, ಕೆಲವೊಂದು ಉಪಜಾತಿಗಳನ್ನು ದೇವಾಡಿಗ ಜಾತಿಗೆ ಸೇರಿಸಿರುವುದು ಅನ್ಯಾಯವಾಗಿದೆ.
ಈ ಬಾರಿಯ ಕರ್ನಾಟಕ ರಾಜ್ಯಾದ್ಯಂತ ಮರುಸರ್ವೆ ಮಾಡುವಾಗ್ಗೆ ನಾವು ದೇವಾಡಿಗರೆಲ್ಲರೂ ದೇವಾಡಿಗರಲ್ಲಿ ಉಪಜಾತಿ (ಸೇರಿಗಾರ, ಶೇರಿಗಾರ, ಮೊಯಿಲಿ)/ ಅಲ್ಲದೆ ಉಪನಾಮ ಬಲಿ, ಗೋತ್ರ, ಊರು ಆಧಾರಿತಗಳನ್ನು ನಮೂದಿಸದೆ ಹಿಂದೆ ಮಾಡಲಾದ ಗಣತಿಯಲ್ಲಿ ಮಾಡಲಾದ ತಪ್ಪಿನ ಬದಲಾಗಿ ಜಾತಿ ಕಲಂನಲ್ಲಿ ಎಲ್ಲರೂ ಕೂಡಾ ದೇವಾಡಿಗ ಎಂದು ನಮೂದಿಸಬೇಕು ಎಂದು ತಿಳಿಸಿದ್ದಾರೆ.