ಅಮೃತ ಭಾರತಿ ಶ್ರೀಕೃಷ್ಣ ಜನ್ಮಾಷ್ಟಮಿ ಶೋಭಾಯಾತ್ರೆ

hbr
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಬೃಹತ್ ಶೋಭಾಯಾತ್ರೆ ನಡೆಯಿತು.

3000ದಷ್ಟು ವಿದ್ಯಾರ್ಥಿಗಳು ಪಾಲಕರು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿದ್ದರು. ಶ್ರೀ ಅನಂತಪದ್ಮನಾಭ ದೇವಸ್ಥಾನ ಕೆಳಪೇಟೆ ಹೆಬ್ರಿ, ಶ್ರೀ ಗಜಾನನ ಕ್ಯಾಶ್ಯೂ ಇಂಡಸ್ಟ್ರೀಸ್ ಕುಚ್ಚೂರು ರೋಡ್ ಹೆಬ್ರಿ, ಬಂಟರ ಭವನ ಆಗುಂಬೆ ರಸ್ತೆ - ಹೀಗೆ ಮೂರು ಕಡೆಗಳಿಂದಲೂ ಏಕಕಾಲದಲ್ಲಿ ಪೂಜೆ ನಡೆದು ಶೋಭಾ ಯಾತ್ರೆ ಹೊರಟು ಸಾಗಿತು. ಪಟ್ಟಣದಲ್ಲಿ ಸಾಗಿ ಬಂದು ಅಮೃತ ಭಾರತಿ ಮೈದಾನದಲ್ಲಿ ಮೊಸರು ಕುಡಿಕೆ, ಕೋಲಾಟ, ಕುಣಿತ ಭಜನೆ, ಹುಲಿ ಕುಣಿತ ಪ್ರದರ್ಶನಗಳೊಂದಿಗೆ ಸಂಪನ್ನಗೊಂಡಿತು.

ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷ ಸಿಎ ಎಂ.ರವಿ ರಾವ್, ಕಾರ್ಯದರ್ಶಿ ಗುರುದಾಸ್ ಶೆಣೈ, ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಸತೀಶ್ ಪೈ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್, ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಟ್ರಸ್ಟಿಗಳಾದ ಭಾಸ್ಕರ್ ಜೋಯಿಸ್, ಯೋಗೇಶ್ ಭಟ್, ಸುದೀರ್ ನಾಯಕ್, ಬಾಲಕೃಷ್ಣ ಮಲ್ಯ, ವಿಷ್ಣುಮೂರ್ತಿ ನಾಯಕ್, ಲಕ್ಷ್ಮಣ್ ಭಟ್, ಹಾಸ್ಟೆಲ್ ಕಮಿಟಿ ಸದಸ್ಯರಾದ ರಾಮಕೃಷ್ಣ ಆಚಾರ್ಯ, ಪ್ರಾಂಶುಪಾಲ ಪ್ರಕಾಶ್ ಜೋಗಿ, ಅರುಣ್ ಎಚ್.ವೈ., ಮುಖ್ಯಶಿಕ್ಷಕಿ ಅನಿತಾ, ಅಪರ್ಣಾ ಆಚಾರ್, ಶಕುಂತಲಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ ಕುಮಾರ್ ಶೆಟ್ಟಿ, ಕ್ಯಾಂಪಸ್ ಮೇಲ್ವಿಚಾರಕ ರಾಘವೇಂದ್ರ, ಅಕೌಂಟ್ಸ್ ವಿಭಾಗದ ಮಹೇಶ್, ಶಿಕ್ಷಕರು, ಉಪನ್ಯಾಸಕರು, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪಾಲಕರು, ಸ್ಥಳೀಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net