ಜಾತಿ ಗಣತಿ ವೇಳೆ ಗೊಲ್ಲ ಎಂದೇ ನಮೂದಿಸಿ

mgd
Published on

ಮಾಗಡಿ: ರಾಜ್ಯದಲ್ಲಿ ಸುಮಾರು 12 ಸಾವಿರ ಮಂದಿ ಗೊಲ್ಲ ಸಮುದಾಯದವರಿದ್ದಾರೆ. ಈ ಬಗ್ಗೆ ಕೆಲ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲದಿದ್ದರೆ ವಿಎಗಳಿಂದ ಮಾಹಿತಿ ಪಡೆಯಲಿ. ಜಾತಿ ಗಣತಿ ಮಾಡಲು ಅಧಿಕಾರಿಗಳು ಬಂದಾಗ ಸಮುದಾಯದವರು ಗೊಲ್ಲ ಎಂದೇ ನಮೂದಿಸಬೇಕು. ಈ ಬಗ್ಗೆ ರ್ನಿಲಸಿದರೆ ಸರ್ಕಾರದ ಸೌಲತ್ತುಗಳಿಂದ ವಂಚಿತರಾಗುತ್ತೇವೆ ಎಂದು ಶ್ರೀ ಕೃಷ್ಣ ಯಾದವ ಗೊಲ್ಲ ಸಂದ ತಾಲೂಕು ಅಧ್ಯಕ್ಷ ಪುಟ್ಟರಾಜು ಯಾದವ್​ ಎಚ್ಚರಿಸಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಶನಿವಾರ ಶ್ರೀ ಕೃಷ್ಣ ಯಾದವ ಗೊಲ್ಲ ಸಂದಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಮಾತನಾಡಿದ ಅವರು,

ಸರ್ಕಾರವು ವಿವಿಧ ಕಮಿಟಿಗಳಿಗೆ ಗೊಲ್ಲ ಜನಾಂದವರನ್ನು ನೇಮಿಸಬೇಕು. ಹಾಗೆಯೇ ಜಿಪಂ, ತಾಪಂ ಚುನಾವಣೆಗಳಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ, ಅಲೆಮಾರಿ ಅಭಿವೃದ್ಧಿ ನಿಗಮದ ಸೌಲಭ್ಯಗಳನ್ನು ಬೇರೆಯವರು ಕಬಳಿಸುತ್ತಿದ್ದು, ಈ ಬಗ್ಗೆ ಶಾಸಕರು ಗಮನಹರಿಸಿ, ಅರ್ಹರಿಗೆ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.

ಗೊಲ್ಲ ಜನಾಂಗದಲ್ಲಿ ಯಾವುದೇ ತಾರತಮ್ಯವಿಲ್ಲ. ಆದರೆ ಕೆಲವರು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಎನ್ನುತ್ತಿದ್ದಾರೆ. ಅದನ್ನು ಪಡೆಯಲು ನಾವು ಅಡ್ಡಿಪಡಿಸುವುದಿಲ್ಲ. ಸಮುದಾಯ ಮುಖ್ಯವಾಹಿನಿಗೆ ಬಂದು ವಿದ್ಯಾವಂತರಾಗಿ ಸರ್ಕಾರದ ಸೌಲತ್ತುಗಳನ್ನು ಪಡೆಯಲಿ ಎಂದರು.

ತಾಲೂಕಿನಲ್ಲಿ ಗೊಲ್ಲ ಸಮುದಾಯದ ಗ್ರಾಮಳಿಗೆ ರಸ್ತೆ, ಶುದ್ಧ ಕುಡಿಯುವ ನೀರು, ಹಾಸ್ಟಲ್​ಗಳಿಲ್ಲ. ಜನಾಂಗವನ್ನು ಭಾಗ ಮಾಡಲು ಕೆಲವರು ಮುಂದಾಗಿದ್ದಾರೆ. ನಾವೆಲ್ಲ ಒಂದು ಎಂಬ ಸಂದೇಶ ರಾಜ್ಯಕ್ಕೆ ರವಾನೆಯಾಗಬೇಕು ಎಂದರು.

ಧನಂಜಯ, ಅಪ್ಪಾಜಿ ಗೌಡ, ಕೋರಮಂಗಲ ನಾರಾಯಣ್​, ಸುರೇಶ್​, ವೆಂಕಟೇಶ್​, ರಾಮಯ್ಯ, ಹನುಮಂತಯ್ಯ, ಸಂಪಮಲ್ಲಯ್ಯ, ವೆಂಕಟಪ್ಪ, ಉಮೇಶ್​, ಮೂರ್ತಿ ಕುಮಾರ್​, ಪ್ರಕಾಶ್​, ಕೃಷ್ಣಪ್ಪ, ಸಿ.ಜಯರಾಮು ಇದ್ದರು.

ಸತ್ಯಕ್ಕೆ ಜಯ

ಸತ್ಯಕ್ಕೆ ಎಂದಿಗೂ ಜಯ ಎಂಬುದನ್ನು ಶ್ರೀಕೃಷ್ಣ ಸಾಬೀತುಪಡಿಸಿದ್ದಾನೆ. ಆದರೀಗ ಸತ್ಯಕ್ಕಿಂತ ಅಸತ್ಯ, ಅಹಿಂಸೆಗಿಂತ ಹಿಂಸೆ, ಹೊಟ್ಟೆ ಕಿಚ್ಚು, ಅಸೂಯೆ ಹೆಚ್ಚಾಗಿದೆ. ಎಷ್ಟೇ ಕಷ್ಟ ಬಂದರೂ ಕೊನೆಗೆ ಗೆಲ್ಲುವುದು ಸತ್ಯ ಎಂಬುದನ್ನು ಅರಿಯಲು ಯುವಕರು ಶ್ರೀ ಕೃಷ್ಣನ ಆದರ್ಶಗಳನ್ನು ಪಾಲಿಸಬೇಕು ಎಂದು ತಹಸೀಲ್ದಾರ್​ ಶರತ್​ ಕುಮಾರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net