ಅರಮನೆಯಲ್ಲಿ ಗಣಪನ ಪ್ರತಿಷ್ಠಾಪನೆ

15-RNR-04 shrinivas kaki
Published on

ರಾಣೆಬೆನ್ನೂರ: ಇಲ್ಲಿಯ ಸಿದ್ದೇಶ್ವರ ನಗರದಲ್ಲಿನ ನೀಲಕಂಠಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾಕಿ ಜನ ಸೇವಾ ಸಂಸ್ಥೆ ವತಿಯಿಂದ ಪ್ರಸಕ್ತ ವರ್ಷ ವಿಘ್ನನಿವಾರಕನಿಗೆ ಅರಮನೆ ನಿರ್ಮಾಣ ಮಾಡಲಾಗಿದ್ದು, ವಿಘ್ನೇಶ್ವರ ಮಹಾರಾಜ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ಕಾಕಿ ಜನಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ತಿಳಿಸಿದರು.


ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ಪ್ರತಿ ವರ್ಷ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, 6ನೇ ವರ್ಷದ ಗಣೇಶೋತ್ಸವ ಅಂಗವಾಗಿ ಸೆ. 18ರಂದು ಅರಮನೆಯಲ್ಲಿ ವಿಘ್ನೕಶ್ವರ ಮಹಾರಾಜ ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.


ಕಳೆದ 5 ವರ್ಷದಲ್ಲಿ ಬಾಹುಬಲಿ, ಇಡಗುಂಚಿ ಗಣೇಶ, ಕೊಲ್ಲಾಪುರ ಮಹಾಲಕ್ಷ್ಮೀ ಸೇರಿ ವಿಭಿನ್ನ ರೂಪದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಜನರನ್ನು ಆರ್ಕಷಣೆ ಮಾಡಿದೆ. ಈ ಬಾರಿ ಉತ್ತರ ಭಾರತೀಯ ಶೈಲಿಯಲ್ಲಿ ನಿಪುಣ ಕಲಾವಿದರಿಂದ ಅರಮನೆ ನಿರ್ವಿುಸಲಾಗಿದೆ. ಆಕರ್ಷಕ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.


ಈ ಬಾರಿ ಗಣೇಶೋತ್ಸವದಲ್ಲಿ ಸುಮಾರು 65 ಕೆಜಿ ತೂಕವುಳ್ಳ ಧನಸ್ಸು ಎತ್ತುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತರಾದವರಿಗೆ ಸೂಕ್ತ ಬಹುಮಾನ ನೀಡಲಾಗುವುದು. 11 ದಿನಗಳ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅನ್ನ ಪ್ರಸಾದ ವಿತರಣೆ ಮಾಡಲಾಗುವುದು ಎಂದರು.


ಕುರುಹಿನಶೆಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಕಾರ್ಯದರ್ಶಿ ಮಂಜುನಾಥ ಎಚ್., ಹನುಮಂತಪ್ಪ ಕಾಕಿ, ಶೋಭಾ ಹೊಸಪೇಟೆ, ರೇಣುಕಾ ಅಮಾಸಿ, ಮುಖಂಡರಾದ ಶಿವಾನಂದ ಬಗಾದಿ, ಶಿವಶಂಕರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net