

ಪುತ್ತೂರು ಗ್ರಾಮಾಂತರ: ಮಕ್ಕಳನ್ನು ಸಾಹಿತ್ಯದಲ್ಲಿ ಬೆರೆಸಿಕೊಳ್ಳುವುದು ಉತ್ತಮ ವಿಚಾರ. ಶಾಲಾ-ಕಾಲೇಜುಗಳಲ್ಲಿ ಡ್ಯಾನ್ಸ್, ಹಾಡುಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಸಾಹಿತ್ಯಕ್ಕೆ ಉತ್ತೇಜನ ನೀಡುತ್ತಿಲ್ಲ. ಸಾಹಿತ್ಯ ನಮ್ಮನ್ನು ಬೆಳೆಸುತ್ತದೆ ಹಾಗೂ ನಮ್ಮ ಬದುಕಿಗೆ ಶ್ರೀಮಂತಿಗೆ ನೀಡುತ್ತದೆ ಎಂದು ಹಿರಿಯ ಸಾಹಿತಿ ಎ.ಪಿ. ಮಾಲತಿ ತಿಳಿಸಿದರು.
ಆರ್ಯಾಪು ಗ್ರಾಮದ ಸಂಪ್ಯದ ಅಕ್ಷಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ, ಗ್ರಾಮ ಪಂಚಾಯಿತಿ ಆರ್ಯಾಪು, ಅಧ್ವಯ ಕನ್ನಡ ಸಾಹಿತ್ಯ ಸಂಘ ಮತ್ತು ಐಕ್ಯೂಎಸಿ ಅಕ್ಷಯ ಕಾಲೇಜು ಸಂಪ್ಯ ಆಶ್ರಯದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಶನಿವಾರ ನಡೆದ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕಸಾಪ ತಾಲೂಕು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿ ಹರ್ಷಿತಾ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಗೀತಾ ಎಚ್ ಕಾರ್ಯಕ್ರಮ ಉದ್ಘಾಟಿಸಿದರು. ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಆರ್ಯಾಪು ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗೇಶ್, ಹಿರಿಯ ಕೃಷಿಕ ಬೂಡಿಯಾರ್ ರಾಧಾಕೃಷ್ಣ ರೈ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಜಯರಾಜ್ ಭಂಡಾರಿ ಶುಭ ಹಾರೈಸಿದರು. ಅಕ್ಷಯ ಕಾಲೇಜ್ ಸಂಚಾಲಕ ಜಯಂತ ನಡುಬೈಲು ಅಭಿನಂದನಾ ನುಡಿಗಳನ್ನಾಡಿದರು. ಅಧ್ವಯ ಕನ್ನಡ ಸಾಹಿತ್ಯ ಸಂಘ ಅಧ್ಯಕ್ಷ ಹರಿಶ್ಚಂದ್ರ ಇದ್ದರು.
ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕ ನಾರಾಯಣ ಕುಂಬ್ರ ಪ್ರಸ್ತಾವನೆಗೈದರು. ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ಸ್ವಾಗತಿಸಿ, ಚಿಗುರೆಲೆ ಸಾಹಿತ್ಯ ಬಳಗದ ಅಪೂರ್ವ ಕಾರಂತ್ ವಂದಿಸಿದರು. ಆಶಾ ಮಯ್ಯ ಮತ್ತು ಗಿರೀಶ್ ಕೊಲ ನಿರೂಪಿಸಿದರು.
ಕನ್ನಡದಲ್ಲೂ ಐಎಎಸ್ ಬರೆಯುವ ಸಾಧ್ಯತೆಗಳ ಬಗ್ಗೆ ಪ್ರಣವ್ ಭಟ್ ಉಪನ್ಯಾಸ ನೀಡಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಗೋಷ್ಠಿಗಳು ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಸ್ ರೈ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ವಿಂಧುಶ್ರೀ ಸಮಾರೋಪ ಭಾಷಣ ಮಾಡಿದರು. ಪ್ರಮುಖರಾದ ಡಾ.ಎಚ್.ಜಿ. ಶ್ರೀಧರ, ಹರೀಶ್ಚಂದ್ರ, ಶ್ರೀ ಸಂಪತ್ ಕೆ ಪಕ್ಕಳ ಸಂದರ್ಭೋಚಿತವಾಗಿ ಮಾತನಾಡಿದರು.
ಕಾವ್ಯ, ಅಪೂರ್ವ ಕಾರಂತ್, ಆಶಾಮಯ್ಯ ಹರ್ಷಿತ ಹರೀಶ್ ಕುಲಾಲ್, ಪೂರ್ಣಿಮಾ ಪೆಲರ್ಂಪಾಡಿ ವಿವಿಧ ಗೋಷ್ಠಿಗಳನ್ನು ನಿರೂಪಿಸಿದರು.
ಸಾಧಕರಿಗೆ ಸನ್ಮಾನ:
ಮೌನೇಶ್ ವಿಶ್ವಕರ್ಮ(ಸಾಹಿತ್ಯ ಮತ್ತು ರಂಗಭೂಮಿ), ಎ. ಪಿ. ಉಮಾಶಂಕರಿ ಮರಿಕೆ (ಸಾಹಿತ್ಯ ) ಡಾ.ನವೀನ್ ಕುಮಾರ್ ಮರಿಕೆ (ದೈವಾರಾಧನೆ), ಸಂಶುದ್ದೀನ್ ಸಂಪ್ಯ (ಪತ್ರಿಕೋದ್ಯಮ), ಕೇಶವ ಮಚ್ಚಿಮಲೆ (ರಂಗಭೂಮಿ), ಸುಬ್ಬು ಸಂಟ್ಯಾರು (ಯಕ್ಷಗಾನ ), ಪುರಂದರ ಕಲ್ಲರ್ಪೆ (ಶಿಲ್ಪ ಕಲೆ), ಜ್ಞಾನ ರೈ (ಬಹುಮುಖ ಪ್ರತಿಭೆ) ಮತ್ತು ಅನಂದಾಶ್ರಮ ಸೇವಾ ಟ್ರಸ್ಟ್ (ಸಮಾಜಸೇವೆ) ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.