

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಸೇಡಂ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಭವನ ನಿರ್ಮಿಸಲು ಕೋಟಿಗಟ್ಟಲೆ ಹಣ ಖರ್ಚು ಆದರೂ ಕೆಲಸ ಪೂರ್ಣಗೊಂಡಲ್ಲ. ಸರ್ಕಾರಕ್ಕೆ ಹಸ್ತಾಂತರವೂ ಮಾಡಿಲ್ಲ ಎಂದು ಜೈ ಕನ್ನಡಿಗರ ರP್ಷÀಣಾ ವೇದಿಕೆ ಅಧ್ಯP್ಷÀ ಸಚಿನ್ ಫರತಾಬಾದ ದೂರಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ ಭವನದ ಉz್ದೆÃಶವೇ ಹಾಳಾಗಿದೆ. ಭೂತದ ಬಂಗಲೆಯಾಗಿದೆ. ಮೂರು ಸಲ ಟೆಂಡರ್ ಕರೆಯಲಾಗಿದೆ. ೮.೭೫ ಕೋಟಿ ರೂ. ಖರ್ಚು ಮಾಡಿದ್ದು, ೨೦೧೯ರಲ್ಲಿ ಪೂರ್ಣವಾಗಿದೆ ಎಂದು ಹೇಳಿ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದ್ದರು. ಆದರೆ, ನಂತರ ಪುನಃ ಸರ್ಕಾರಕ್ಕೆ ಅನುದಾಣ ಕೇಳಿz್ದÁರೆ ಹೀಗಾಗಿ ಅದು ಅಲ್ಲಿಯೇ ನಿಂತುಕೊAಡಿದೆ ಎಂದರು.
೨೦೧೨ರಲ್ಲಿ ಕೆಲಸ ಆರಂಭವಾಗಿದೆ. ಇದೀಗ ಹಾಳು ಬಿದ್ದಿz್ದÉ. ಆದರೆ ಇದೇ ಮಾರ್ಗದಲ್ಲಿ ನಿತ್ಯ ಸಚಿವರು, ಶಾಸಕರು, ಗಣ್ಯರು ಓಡಾಡುತ್ತಾರೆ. ಆದರೆ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೆ ಕಾಮಗಾರಿಯನ್ನು ಅಕ್ರಮ ನಡೆದಿದೆ ಎಂದು ಆರೋಪಿಸಿದರು. ತನಿಖೆಗೆ ಒತ್ತಾಯಿಸಿ ಸೆ.೫ರಂದು ಜಿ¯್ಲÁಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ತಿಳಿಸಿದರು