ಇಂಜಿನಿಯರ್ಸ್​ ಕಾರ್ಯ ಮಾದರಿ

22GKK1
Published on

ಗೋಕಾಕ: ನಗರದಲ್ಲಿ ಸಮಗ್ರ ಕಟ್ಟಡ ಸಾಮಗ್ರಿಗಳ ಬೃಹತ್​ ಪ್ರದರ್ಶನ ಆಯೋಜಿಸಿರುವ ಗೋಕಾಕ ಇಂಜಿನಿಯರ್ಸ್​ ಅಸೋಸಿಯೇಷನ್​ ಹಾಗೂ ಯುಎಸ್​ ಕಮ್ಯೂನಿಕೇಷನ್​ ಕಾರ್ಯ ಶ್ಲಾನೀಯ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದಲ್ಲಿ ಗೋಕಾಕ ಇಂಜಿನಿಯರ್ಸ್​ ಅಸೋಸಿಯೇಷನ್​ ಹಾಗೂ ಯುಎಸ್​ ಕಮ್ಯೂನಿಕೇಷನ್​ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಟ್ಟಡ ಸಾಮಗ್ರಿ, ಒಳ&ಹೊರ ವಿನ್ಯಾಸ ಮತ್ತು ಪಿಠೋಪಕರಣ, ಗೃಹಸಾಲ ಹಾಗೂ ಬಿಲ್ಡ್​ಟೆಕ್​&2025 ಸಮಗ್ರ ಕಟ್ಟಡ ಸಾಮಗ್ರಿಗಳ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಯುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಮಾತನಾಡಿ, ಗೋಕಾಕ ಡೀರ್ಲಸ್​ ಮತ್ತು ವಿತರಕರು ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಮನೆ ಕಟ್ಟುವವರಿಗೆ ಪ್ರಯೋಜನಕಾರಿಯಾಗಿದೆ ಎಂದರು.

ನಗರಸಭೆ ಆಯುಕ್ತ ರವಿ ರಂಗಸುಭೆ, ವಿನೋದ ಪಾಟೀಲ, ಮಂಜುನಾಥ ಗಜಾಕೋಶ, ಗೋಕಾಕ ಇಂಜಿನಿಯರ್ಸ್​ ಅಸೋಸಿಯೇಷನ್​ ಅಧ್ಯಕ್ಷ ಕಾರ್ಯಧ್ಯಕ್ಷ ಚಿದಾನಂದ ದೇಮಶೆಟ್ಟಿ, ಯುಎಸ್​ ಕಮ್ಯೂನಿಕೇಷನ್​ನ ಉಮಾಪತಿ, ಶಿವಕುಮಾರ, ಕಿರಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net