ಸವಾಲು ಸ್ವೀಕಾರದಿಂದ ಕನಸು ನನಸು

nitte
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನ ಹಾಗೂ ಇಂಜಿನಿಯರ್ಸ್ ದಿನ ಆಚರಿಸಲಾಯಿತು.
Published on

ನಿಟ್ಟೆ: ಜೀವನದಲ್ಲಿ ಮನುಷ್ಯ ತನ್ನ ವೈಫಲ್ಯಗಳಿಂದ ಪಾಠ ಕಲಿಯಬೇಕು. ಸವಾಲು ಸ್ವೀಕರಿಸುವ ಮೂಲಕ ಕನಸು ನನಸು ಮಾಡಬಹುದು. ನಾವು ಬಯಸಿದ ಆ ಕನಸುಗಳತ್ತ ಓಡಬೇಕಾಗಿದೆ, ಆದರೆ ಅದಕ್ಕಾಗಿ ಕಷ್ಟಪಟ್ಟು ಶ್ರಮಿಸಬೇಕು ಎಂದು ಯುನಿಕೋರ್ಟ್ ಸಂಸ್ಥೆ ಸಂಸ್ಥಾಪಕ ಹಾಗೂ ಚೀಫ್ ಟೆಕ್ನಾಲಜಿ ಆಫೀಸರ್ ಪ್ರಶಾಂತ್ ಶೆಣೈ ಕಟಪಾಡಿ ಹೇಳಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಶಿಕ್ಷಕರ ದಿನ ಹಾಗೂ ಇಂಜಿನಿಯರ್ಸ್ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ.ಗೋಪಾಲ ಮುಗೇರಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿಟ್ಟೆ ಪರಿಗಣಿಸಲ್ಪಟ್ಟ ವಿವಿ ಕುಲಸಚಿವ ಡಾ.ಹರ್ಷಾ ಹಾಲಹಳ್ಳಿ ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲ ಹಾಗೂ ಪರೀಕ್ಷಾ ಮುಖ್ಯಸ್ಥ ಡಾ.ಶ್ರೀ ನಿವಾಸ ರಾವ್ ಬಿ.ಆರ್. ಸನ್ಮಾನಿತರನ್ನು ಪರಿಚಯಿಸಿದರು. ಉಪಪ್ರಾಂಶುಪಾಲ ಹಾಗೂ ಡೀನ್ (ಅಕಾಡೆಮಿಕ್ಸ್) ಡಾ.ಐ.ಆರ್.ಮಿತ್ತಂತಾಯ ವಂದಿಸಿದರು. ಡಾ.ನರಸಿಂಹ ಬೈಲ್ಕೇರಿ, ಡೀನ್ ಸ್ಟೂಡೆಂಟ್ ವೆಲ್ಫೇರ್ ಕಾರ್ಯಕ್ರಮ ಸಂಯೋಜಿಸಿದರು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಪೈ ಕಾರ್ಯಕ್ರಮ ನಿರೂಪಿಸಿದರು.

ಸಾಧಕರ ಸನ್ಮಾನ

2023-24ನೇ ಸಾಲಿನಲ್ಲಿ ಪಿಎಚ್.ಡಿ ಪದವಿ ಪಡೆದ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್(ವಿಎಲ್‌ಎಸ್‌ಐ ಡಿಸೈನ್ ಟೆಕ್ನಾಲಜಿ) ವಿಭಾಗದ ಡಾ.ಸುಷ್ಮಾ ಪಿ.ಎಸ್., ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ.ಕೀರ್ತನಾ ಬಿ.ಸಿ., ಮೆಕಾನಿಕಲ್ ವಿಭಾಗ ಡಾ.ಮೆಲ್ವಿನ್ ರಾಜೇಶ್ ಕಾಸ್ಟೆಲಿನೋ, ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗದ ಡಾ.ಚರಿಷ್ಮಾ, ಕಂಪ್ಯೂಟರ್ ಸೈನ್ಸ್ ವಿಭಾಗ ಡಾ.ಅಸ್ಮಿತಾ ಪೂಜಾರಿ, ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗ ಡಾ.ಸತೀಶ್ ರಾವ್, ಇಲೆಕ್ಟ್ರಿಕಲ್ ಇಲೆಕ್ಟ್ರಾನಿಕ್ಸ್ ವಿಭಾಗದ ಡಾ.ದಿನೇಶ್ ಶೆಟ್ಟಿ, ರೋಬೋಟಿಕ್ಸ್ ಕೃತಕ ಬುದ್ಧಿವಂತಿಕೆ ವಿಭಾಗ ಡಾ.ಪ್ರಸಾದ್ ಪ್ರಭು, ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗ ಡಾ.ಶುಭಾ ಬಿ., ಇನ್‌ಫಾರ್ಮೇಶನ್ ಸೈನ್ಸ್ ವಿಭಾಗ ಡಾ.ದೀಪಾ, ಸಿವಿಲ್ ವಿಭಾಗದ ಡಾ.ಮಂಜುನಾಥ ಎಂ., ಇಲೆಕ್ಟ್ರಾನಿಕ್ಸ್ ವಿಭಾಗ (ವಿಎಲ್‌ಎಸ್‌ಐ ಡಿಸೈನ್ ಟೆಕ್ನಾಲಜಿ)ಯ ಡಾ.ನಿಶಾಂತ್ ಎ., ಇನ್‌ಫಾರ್ಮೇಶನ್ ಸೈನ್ಸ್ ವಿಭಾಗ ಡಾ.ಸಂತೋಷ್ ಎಸ್., ಇಲೆಕ್ಟ್ರಿಕಲ್ ಇಲೆಕ್ಟ್ರಾನಿಕ್ಸ್ ವಿಭಾಗದ ಡಾ.ನಂದಿನಿ ಕೆ.ಕೆ., ಸಿವಿಲ್ ವಿಭಾಗದ ಡಾ.ಪ್ರಶಾಂತ್ ಕುಮಾರ್ ಹಾಗೂ ನಿಟ್ಟೆ ವಿವಿ ಅಂತಾರಾಷ್ಟ್ರೀಯ ಸಂಪರ್ಕ ವಿಭಾಗ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net