ವಿಜಯವಾಣಿ ಸುದ್ದಿಜಾಲ ಬೈಂದೂರು
ಬೈಂದೂರು ಸಾಗರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಸಭೆ ಪ್ರಧಾನ ಕಚೇರಿ ವಠಾರದಲ್ಲಿ ನಡೆಯಿತು.
ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಕಾರ್ಯವ್ಯಾಪ್ತಿಯಲ್ಲಿ ಸದಸ್ಯರ ವಿಶ್ವಾಸ ಗಳಿಸಿ ಆರ್ಥಿಕ ಸ್ಥಿರತೆಯೊಂದಿಗೆ ಅತ್ಯುತ್ತಮ ಚಟುವಟಿಕೆ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವುದು ಸಂಘದ ಹೆಗ್ಗಳಿಕೆ. ಯಶಸ್ವಿ ಇಪ್ಪತ್ತೆರಡು ವರ್ಷದ ಸಂಭ್ರಮದ ಜತೆಗೆ 257 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸಿ ಪ್ರಸಕ್ತ ಸಾಲಿನಲ್ಲಿ 54.34 ಲಕ್ಷ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.13 ಲಾಭಾಂಶ ನೀಡಲಾಗುವುದು. ಪ್ರಧಾನ ಕಚೇರಿಗೆ ಜಾಗ ಪಡೆದುಕೊಂಡಿದ್ದು, ಶೀಘ್ರವೇ ನೂತನ ಕಟ್ಟಡ ನಿರ್ಮಾಣವಾಗಲಿದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ನಿರ್ದೇಶಕರಾದ ಎಸ್.ರಾಜು ಪೂಜಾರಿ, ಶಂಕರ ಪೂಜಾರಿ, ಚಿಕ್ಕು ಪೂಜಾರಿ, ಕಲ್ಪನಾ ಭಾಸ್ಕರ, ಕೇಶವ ಪೂಜಾರಿ, ಶ್ರೀನಿವಾಸ ಪೂಜಾರಿ, ಜಯಸೂರ್ಯ ಪೂಜಾರಿ, ಶೇಖರ ಪೂಜಾರಿ, ಉದಯ ಜಿ. ಪೂಜಾರಿ, ವೆಂಕಟೇಶ ಮಾಚ ಪೂಜಾರಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ಪೂಜಾರಿ ವಾರ್ಷಿಕ ಲೆಕ್ಕ ಪರಿಶೋಧನಾ ವರದಿ, ಮುಂದಿನ ಸಾಲಿನ ಆಯ-ವ್ಯಯ ಬಜೆಟ್ ಹಾಗೂ ಮುಂದಿನ ಸಾಲಿನ ಯೋಜಿತ ಕಾರ್ಯಕ್ರಮಗಳನ್ನು ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು.