ಇಂಜಿನಿಯರ್ಸ್ ಡೇ ಆಚರಣೆ

15 rtl 01
Published on

ರಟ್ಟಿಹಳ್ಳಿ: ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ರಾಜ್ಯದ ಕೆಆರ್​ಎಸ್, ಭದ್ರಾವತಿ ವಿಐಎಸ್​ಎಲ್ ಸೇರಿ ಅನೇಕ ಜಲಾಶಯಗಳ ನಿರ್ವಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಸೆ. 15ರಂದು ಅವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್ ಡೇ ಆಚರಣೆ ಮಾಡಲಾಗುತ್ತಿದೆ ಎಂದು ಗುತ್ತಿಗೆದಾರರ ಆರ್.ಎನ್. ಗಂಗೋಳ ಹೇಳಿದರು.
ಪಟ್ಟಣದಲ್ಲಿ ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರು ಶುಕ್ರವಾರ ಹಮ್ಮಿಕೊಂಡಿದ್ದ ಸರ್.ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಅಭಿಯಂತರರಾದ ಸದಾನಂದ ರಾಮಗಿರಿ, ಎಚ್.ಆರ್. ಅಸುಂಡಿ, ಶಿವಕುಮಾರ, ಲೋಕೇಶ ಹಳಕಟ್ಟಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಪಿ. ಪ್ರಕಾಶ, ಕೆ.ವಿ. ವರಹದ, ಶಂಭಣ್ಣ ಗೂಳಪ್ಪನವರ, ರುದ್ರಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net