ಮೈದಾಳಿದ ಧೈರ್ಯ, ಭರವಸೆ ಹಂಸಾಗೆ ಪುನರ್ಜನ್ಮ

Mydala_kere
Published on

ತುಮಕೂರು: ಬಾಲ್ಯ ಸ್ನೇಹಿತೆಯೊಂದಿಗೆ ಭಾನುವಾರ ಮೈದಾಳ ಕೆರೆ ನೋಡಲು ಹೋಗಿ ೋಟೋ ಕ್ಲಿಕ್ಕಿಸಿಕೊಳ್ಳುವಾಗ ಕಾಲುಜಾರಿ ಪ್ರಪಾತಕ್ಕೆ ಬಿದ್ದಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿನಿ ಜಲಕಂಠಕದಿಂದ ಪಾರಾಗಿ ಪುನರ್ಜನ್ಮ ಪಡೆದಿದ್ದಾರೆ.

ನಗರದ ಎಸ್​ಐಟಿ ಕಾಲೇಜಿನಲ್ಲಿ ಕೆಮಿಕಲ್​ ಇಂಜಿನಿಯರಿಂಗ್​ ಓದುತ್ತಿರುವ ಗುಬ್ಬಿ ತಾಲೂಕು ಶಿವರಾಂಪುರದ 19 ವರ್ಷದ ಹಂಸಾ ಸತತ 15ಗಂಟೆಗಳ ಕಾಲ ಬಂಡೆಗಳ ನಡುವೆ ಎದೆಮಟ್ಟದ ನೀರಿನಲ್ಲಿ ನಿಂತು ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಆಕೆಯ ಜೀವ ಉಳಿಸಲು ತುಮಕೂರಿನ ಅಗ್ನಿಶಾಮಕ ಸಿಬ್ಬಂದಿ ಪಟ್ಟ ಪ್ರಯತ್ನ ಲ ನೀಡಿದೆ.

ಭಾನುವಾರ ರಜೆಯಿದ್ದ ಕಾರಣದಿಂದ ಬಾಲ್ಯದ ಗೆಳತಿಯೊಂದಿಗೆ ಮಂದರಗಿರಿ ನೋಡಲು ತೆರಳಿದ್ದ ಹಂಸಾ ಸಮೀಪದಲ್ಲಿಯೇ ಇದ್ದ ಮೈದಾಳ ಕೆರೆ ಕೋಡಿಗೂ ಭೇಟಿ ನೀಡಿದ್ದರು. ಕೋಡಿ ನೀರು ಹರಿಯುತ್ತಿದ್ದ ಜಾಗದಲ್ಲಿ ಬಂಡೆಮೇಲೆ ನಿಂತು ಪೋಟೋ ಕ್ಲಿಕ್ಕಿಸಿಕೊಳ್ಳುವಾಗ ಕಾಲುಜಾರಿ ನೀರಿನಲ್ಲಿ ಕೊಚ್ಚಿಹೋಗಿ ಪ್ರಪಾತಕ್ಕೆ ಬಿದ್ದಿದ್ದರು. ಭಾನುವಾರ ಸಂಜೆಯೇ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ಮಾಡಿತ್ತಾದರೂ ಕತ್ತಲೆಯಾಗಿದ್ದರಿಂದ ಸೋಮವಾರಕ್ಕೆ ಮುಂದೂಡಿದ್ದರು.

ಸೋಮವಾರ ಬೆಳಗ್ಗೆ 7ಕ್ಕೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದಾಗಲು ಹಂಸಾ ಬದುಕುಳಿದಿರುವ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆದರೆ, ಬಂಡೆಗಳ ನಡುವೆ ಸಿಲುಕಿದ್ದು ಯುವತಿಗೆ ಮೇಲೆ ಮಾತನಾಡುತ್ತಿದ್ದ ದನಿ ಕೇಳಿಸಿತ್ತು. ಎದೆಗುಂದದೆ ನೀರಿನಲ್ಲಿ ಕೊಚ್ಚಿಹೋಗದಂತೆ ಮಂಡಿಯೂರಿ ಬಂಡೆ ಮೇಲೆ ಕುಳಿತು ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗ್ಗೆ ಸತತ 5 ಗಂಟೆಗಳ ಕಾರ್ಯಾಚರಣೆ ಸುಖಾಂತ್ಯಕಂಡಿತು. ಪೊಟರೆಯಲ್ಲಿ ಸಿಲುಕಿಕೊಂಡಿದ್ದ ಹಂಸಾ ಪತ್ತೆಯಾದ ಕೂಡಲೇ ಖುಷಿಯಾದ ಅಗ್ನಿಶಾಮಕ ಸಿಬ್ಬಂದಿ ವಿದ್ಯಾರ್ಥಿನಿಯನ್ನು ರಸಿ ಹೊರಗೆ ಕರೆದುಕೊಂಡು ಬಂದಾಗ ನೆರೆದಿದ್ದವರ ಕಣ್ಣಾಲಿಗಳು ತೇವವಾಗಿದ್ದವು. ಹಂಸಾ ೋಷಕರು ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸಿ ನಿಟ್ಟಿಸಿರುವ ಬಿಟ್ಟರು. ರಾತ್ರಿ ಇಡೀ ಚಳಿಯಲ್ಲಿ ನಿದ್ರೆಗೆಟ್ಟಿ ಬಳಲಿದ್ದ ಹಂಸಾಗೆ ಪ್ರಾಥಮಿಕ ಚಿಕಿತ್ಸೆ ನೀಡಿ ತಕ್ಷಣವೇ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.

ಸ್ಕೂಲ್​ ್ರೆಂಡ್​ ಕೀರ್ತಿನಾ ಜತೆ ಮೈದಾಳ ಕೆರೆಗೆ ಹೋಗಿದ್ದೆವು. ೋಟೋ ಕ್ಲಿಕ್ಕಿಸಿಕೊಳ್ಳುವಾಗ ಕಾಲುಜಾರಿ ಕಲ್ಲಿನ ಪೊಟರೆಯಲ್ಲಿ ಸಿಲುಕಿಕೊಂಡೆ. ಧೈರ್ಯಗೆಡದೆ ರಕ್ಷಣೆಗೆ ಯಾರಾದರೂ ಬರುವ ನಂಬಿಕೆಯಿಂದ ಮಂಡಿಯೂರಿ ಕುಂತುಕೊಂಡಿದ್ದೆ. ಇಂತಹ ಅಪಾಯದಲ್ಲಿ ರಕ್ಷಣೆ ಮಾಡಿದ್ದನ್ನು ಸಾಕಷ್ಟು ಸಲ ನೋಡಿದ್ದರಿಂದ ನಾನೂ ಬದುಕುಳಿಯುತ್ತೇನೆ ಎಂಬ ನಂಬಿಕೆ ಬಲವಾಗಿತ್ತು. ತಂದೆ, ತಾಯಿ, ದೇವರನನ್ನು ನೆನಪು ಮಾಡಿಕೊಂಡು ರಾತ್ರಿ ಕಳೆದೆ. ಬೆಳಗ್ಗೆಯಾದ ಕೂಡಲೇ ಮೇಲಿನಿಂದ ದನಿ ಕೇಳಲಾರಂಭಿಸಿತು. ನಾನು ಜೋರಾಗಿ ಕೂಗಲಾರಂಭಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು. ಪ್ರಾಣ ಉಳಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಂಸ ಅಪಾಯದಿಂದ ಪಾರಾದ ವಿದ್ಯಾರ್ಥಿನಿ ಜಿಲ್ಲಾಧಿಕಾರಿಗೆ ಮಾಹಿತಿಯೇ ಇರಲಿಲ್ಲ! ಮೈದಾಳ ಕೆರೆಯಲ್ಲಿ ಯುವತಿ ಪ್ರಪಾತಕ್ಕೆ ಬಿದ್ದಿದ್ದ ಟನೆ ಬಗ್ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ದಿನಪತ್ರಿಕೆಗಳಲ್ಲಿ ವರದಿ ನೋಡುವವರೆಗೂ ತಿಳಿದಿರಲೇ ಇಲ್ಲ. ಭಾನುವಾರ ಸಂಜೆ ಯುವತಿ ನೀರಿಗೆ ಬಿದ್ದು ಸಿಲುಕಿಕೊಂಡು ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ರಾತ್ರಿಯಾಗಿದ್ದರಿಂದ ಸೋಮವಾರ ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆ ಮಾಡುವವರೆಗೂ ಜಿಲ್ಲಾಧಿಕಾರಿಗೆ ಮಾಹಿತಿಯೇ ಇಲ್ಲದಿರುವುದು ಜಿಲ್ಲಾಡಳಿತದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿತ್ತು. ಸೋಮವಾರ ಬೆಳಗ್ಗೆ ಪತ್ರಿಕೆಗಳ ಮೂಲಕ ಮಾಹಿತಿ ತಿಳಿದುಕೊಂಡು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಅಗ್ನಿಶಾಮಕ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದರು. ಇಷ್ಟು ದೊಡ್ಡ ಅವಡ ಸಂಭವಿಸಿದರೂ ನನಗೆ ಮಾಹಿತಿಯನ್ನೇ ನೀಡಿಲ್ಲ ಎಂದು ಕೆಳಹಂತದ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಹಂಸಾಗೆ ಜಲಕಂಟಕ ಇದೇ ಮೊದಲಲ್ಲ! ಗುಬ್ಬಿ ತಾಲೂಕು ಶಿವರಾಂಪುರದ 19 ವರ್ಷದ ಹಂಸಾಗು ನೀರಿಗೂ ವಿಶೇಷವಾದ ನಂಟಿದೆ. ಕಾಕತಾಳೀಯ ಎಂಬಂತೆ ನಿರಿನಲ್ಲಿಯೇ ವಾಸಿಸುವ ಪಯ ಹೆಸರು ಇಟ್ಟುಕೊಂಡಿರುವ ಹಂಸಾ ಜಲಕಂಟಕದಿಂದ ಪಾರಾಗಿ ಬಂದಿರುವುದು ಇದೇ ಮೊದಲೇನಲ್ಲ. ಈ ಮೊದಲು ಮಂತ್ರಾಲಯದಲ್ಲಿಯೂ ಒಮ್ಮೆ ಕಾಲು ಜಾರಿ ಬಿದ್ದರಾದರೂ ನೀರಿಗೆ ಬೀಳುವ ಅಪಾಯದಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದರು. ಈ ಸಂದರ್ಭದಲ್ಲಿ ಆಕೆಯ ಮೊಬೈಲ್​ ನೀರಿನಲ್ಲಿ ಬಿದ್ದು ಹೋಗಿತ್ತು ಎಂಬುದನ್ನು ಹಂಸ ಸ್ಮರಿಸಿಕೊಂಡರು. ನೀರಿನಲ್ಲಿರುವಾಗ ತುಂಬ ಎಚ್ಚರಿಕೆಯಿಂದ ಇರಬೇಕು ಎಂಬ ಅರಿವಿದ್ದರೂ ಅಪಾಯಕ್ಕೆ ಸಿಲುಕಿದೆ. ಇರಡನೇ ಸಲ ನೀರಿನಲ್ಲಿ ಹೋಗಬೇಕಿದ್ದ ಪ್ರಾಣವನ್ನು ಉಳಿಸಿಕೊಂಡು ಬಂದಿದ್ದೇನೆ, ಮುಂದೆಯೂ ಎಚ್ಚರಿಕೆಯಿಂದ ಇರುತ್ತೇನೆ ಎಂದು ಹಂಸ ಆಸ್ಪತ್ರೆಯಲ್ಲಿ ಹೇಳಿದರು.

ಭಾನುವಾರ ಸಂಜೆ ಹಂಸಾ ಎಂಬ ಯುವತಿ ನೀರಿನಲ್ಲಿ ಬಿದ್ದು ಕಲ್ಲುಗಳ ನಡುವೆ ಸಿಲುಕಿದ್ದ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ನೀರು ಹರಿಯುವುದನ್ನು ನಿಲ್ಲಿಸಿದ್ದರು. ಸೋಮವಾರ ಕಾರ್ಯಚರಣೆ ಮುಂದುವರಿಸಿ ಯುವತಿಯನ್ನು ರಸಲಾಗಿದೆ. ಕೆರೆಯ ಬಳಿ ಪೊಲೀಸರನ್ನು ನಿಯೋಜಿಸಿದ್ದು ಜನರನ್ನು ನಿಯಂತ್ರಿಸಲಾಗುತ್ತಿದೆ.

ಕೆ.ವಿ.ಅಶೋಕ್​

ಜಿಲ್ಲಾ ಪೊಲೀಸ್​ ಅಧೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net