

ಮೂಲ್ಕಿ: ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ದುಸ್ಥಿತಿಯಿಂದ ಶಿಕ್ಷಣದಿಂದ ವಂಚಿತರಾಗುವ ಕಾರಣ ಎಲ್ಲರೂ ಸೇರಿ ಪ್ರೋತ್ಸಾಹಿಸಬೇಕು ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಪಿ.ವಿ.ಶೆಟ್ಟಿ ಹೇಳಿದರು
ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಒಂಬತ್ತನೇ ರ‍್ಯಾಂಕ್ ಗಳಿಸಿ ಸಾಧನೆಗೈದ ಗ್ರಾಮೀಣ ಭಾಗದ ವಿದ್ಯಾರ್ಥಿನಿ ಶಿಮಂತೂರು ಮಜಲಗುತ್ತು ಹರ್ಷಿತಾ ಆರ್.ಶೆಟ್ಟಿ ಅವರನ್ನು ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಸರಳ ಕಾರ್ಯಕ್ರಮದಲ್ಲಿ ಗೌರವಿಸಿ ಮಾತನಾಡಿದರು.
ಅವರ ಮುಂದಿನ ಶಿಕ್ಷಣದ ಖರ್ಚು ವೆಚ್ಚ ತಾವೇ ಭರಿಸುವುದಾಗಿ ಭರವಸೆ ನೀಡಿದರು. ಹರ್ಷಿತಾ ಆರ್.ಶೆಟ್ಟಿ ಅವರ ತಂದೆ ರಾಜೇಶ್ ಶೆಟ್ಟಿ, ತಾಯಿ ವಿಜಯಾ ಮತ್ತಿತರರು ಉಪಸ್ಥಿತರಿದ್ದರು.