ಗ್ರಾಮೀಣ ಮಹಿಳೆಯರ ಉದ್ಯಮಶೀಲತೆಗೆ ಉತ್ತೇಜನ

2 cmy 6
Published on

ಕುರುಬೂರಿನಲ್ಲಿ ಮಾಸಿಕ ಸಂತೆ

ಚಿಂತಾಮಣಿ: ತಾಲೂಕಿನ ಕಸಬಾ ಹೋಬಳಿ ಕುರುಬೂರು ಗ್ರಾಮ ಪಂಚಾಯಿತಿಯಲ್ಲಿ ಸಂಜೀವಿನಿ ಮಾಸಿಕ ಸಂತೆಯ ಅಡಿಯಲ್ಲಿ ಮಾಸಿಕ ಸಂತೆ ನಡೆಯಿತು. ತಾಲೂಕು ಅಭಿಯಾನ ನಿರ್ವಹಣ ಟಕ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಕೃಷೀಯೇತರ ತಾಲೂಕು ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರು, ಬಿಆರ್​ಪಿ ಮತ್ತು ಪಿಆರ್​ಐ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಕೃಷಿ ಸಖಿ, ಪಶು ಸಖಿ, ಎಫ್​ಎಲ್​ಸಿಆರ್​ಪಿ ಮತ್ತು ತಾಲೂಕಿನ ವಿವಿಧ ಸ್ವಸಹಾಯ ಸಂಗಳ ಸದಸ್ಯರು ಇದ್ದರು.

ಎಸ್​ಎಚ್​ಜಿ ಸ್ವಸಹಾಯ ಸಂಗಳ ಮಹಿಳೆಯರು ತಾವು ತಯಾರಿಸಿದ ವಿವಿಧ ಉತ್ಪನ್ನಗಳನ್ನು ವಸ್ತು ಪ್ರದರ್ಶನ ಹಾಗೂ ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಗಳಿಸಿದರು. ಒಟ್ಟು 18 ಸ್ವಸಹಾಯ ಸಂಗಳು ಈ ಮಾಸಿಕ ಸಂತೆಯಲ್ಲಿ ಭಾಗವಹಿಸಿದ್ದು, ಈ ರೀತಿಯ ಸಂತೆಗಳು ಗ್ರಾಮೀಣ ಮಹಿಳೆಯ ಉದ್ಯಮಶೀಲತೆ ಮತ್ತು ಆತ್ಮವಿಶ್ವಾಸ ಉತ್ತೇಜಿಸುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net