

ಗೋಕಾಕ: ಕವಿಗಳು ತಾರ್ತಿಕತೆ ಮತ್ತು ಸಂಯೋಜನೆ ಮೂಲಕ ಕವನಗಳನ್ನು ಕಟ್ಟಬಲ್ಲವರಾಗಿದ್ದು ಯುವ ಕವಿಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಜಾನಪದ ವಿದ್ವಾಂಸ ಡಾ.ಸಿ.ಕೆ.ನಾವಲಗಿ ಹೇಳಿದರು.
ನಗರದ ಡಾ.ನಿಂಗಣ್ಣ ಸಣ್ಣಕ್ಕಿ ಪ್ರತಿಷ್ಠಾನ ಸಭಾಂಗಣದಲ್ಲಿ ಕಾವ್ಯಕೂಟ ಕನ್ನಡ ಬಳಗ ಹಾಗೂ ಗುಂಪು ಕಲಾವಿದರ ಬಳಗದ ವತಿಯಿಂದ ಭಾನುವಾರ ವಿಶ್ವ ಸಂಗೀತ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವಿತೆ ಮತ್ತು ಹಾಡು ಒಂದಕ್ಕೊಂದು ಪೂರಕವಾಗಿದ್ದು, ಕೇಳುಗರ ಮನಸ್ಸಿಗೆ ಮುದ ನೀಡಿ, ರಂಜಿಸುತ್ತವೆ ಎಂದರು.
ಕಾವ್ಯಕೂಟ ಬಳಗದ ಸಂಸ್ಥಾಪಕ ಈಶ್ವರ ಮಮದಾಪುರ ಮಾತನಾಡಿ, ಕವಿ ಕವಿತೆ ರಚಿಸಿದರೆ, ಗಾಯಕ ಅದಕ್ಕೆ ಜೀವ ತುಂಬುತ್ತಾನೆ. ಭಾವಪೂರ್ಣ ಕವಿತೆ ಜನರ ಮನಸ್ಸು ತಟ್ಟುವದರೊಂದಿಗೆ ಜೀವಂತವಾಗಿ ಉಳಿಯುತ್ತದೆ ಎಂದರು.
ಡಾ.ಸುಶ್ರೂತ ಕಡಲಗಿಕರ, ಆಶಾ ಸವಸುದ್ದಿ, ರಜನಿ ಜಿರಗ್ಯಾಳ, ಭಾರತಿ ಮದಭಾಂವಿ, ಜ್ಯೋತಿ ಮಾಳಿ, ವಿನುತಾ ನಾವಲಗಿ, ಪುಷ್ಪಾ ಮುರಗೋಡ, ಮಾರುತಿ ದೇಸಾಯಿ, ಮಹಾಂತೇಶ ಕುಂಬಾರ, ರಾಮಚಂದ್ರ ಕಾಕಡೆ, ರಾಯಪ್ಪ ಗುದಗನವರ, ಕಾಡೇಶಕುಮಾರ ಇತರರಿದ್ದರು.