ಎಂಪ್ರೆಸ್​ ಕಾಲೇಜಿನ ಆದಿತಿ ಜಿಲ್ಲೆಯ ಟಾಪರ್​

Arts_Aadhiti
Published on

ತುಮಕೂರು: ಈ ಬಾರಿ ದ್ವೀತಿಯ ಪಿಯು ಪರೀಕ್ಷೆಯ ಕಲಾ ವಿಭಾಗದಲ್ಲಿ ಎಂಪ್ರೆಸ್​ ಬಾಲಕಿಯರ ಕಾಲೇಜಿನ ಆದಿತಿ ಜಿಲ್ಲೆಗೆ ಟಾಪರ್​ ಆಗಿ ಹೊರಹೊಮ್ಮಿದ್ದಾರೆ.

ಕಲಾ ವಿಭಾಗದಲ್ಲಿ ಎಚ್​.ಆದಿತಿ (584), ತಿಪಟೂರು ಬಸವೇಶ್ವರ ಪಿಯು ಕಾಲೇಜಿನ ಗಣೇಶ್​ (580) ಜಿಲ್ಲೆಯ ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ತಿಪಟೂರಿನ ಬಸವೇಶ್ವರ ಪದವಿಪೂರ್ವ ಕಾಲೇಜಿನ ಬಿ.ಆರ್​.ಚೇತನ್​ (579) ತೃತೀಯ ಟಾಪರ್​ ಎನಿಸಿದರು.

ಐಎಎಸ್​ ಕನಸು: ಜಿಲ್ಲೆಗೆ ಟಾಪರ್​ ಎನಿಸಿರುವ ಆದಿತಿಗೆ ಐಎಎಸ್​ ಅಧಿಕಾರಿ ಆಗುವ ಗುರಿ ಇದೆ. ಪುಟ್ಟ ಆದಿತಿ ಕಣ್ಣಂಗಳಲ್ಲಿ ಸಮಾಜಕ್ಕೆ ಏನಾದರೂ ಒಳಿತು ಮಾಡಲು ಐಎಎಸ್​ ಅಧಿಕಾರಿ ಆಗಬೇಕೆಂಬ ದೊಡ್ಡ ಕನಸಿದೆ. ಕನ್ನಡ-100, ಇಂಗ್ಲೀಷ್​-97, ಇತಿಹಾಸ-100, ರಾಜ್ಯಶಾಸ್ತ್ರ-97, ಅರ್ಥಶಾಸ್ತ್ರ-95, ಸಮಾಜಶಾಸ್ತ್ರ- 95 ಅಂಕಗಳಿಸಿ ಉತ್ತಮ ಸಾಧನೆ ತೋರಿದ್ದಾರೆ. ನಗರದ ಎಸ್​ಐಟಿ ಕಾಲೇಜಿನ ಹಿಂಭಾಗದಲ್ಲಿ ವಾಸವಿರುವ ಆದಿತಿ ತಂದೆ ಬಿ.ಕೆ.ಹೇಮಂತ್​ ಖಾಸಗಿ ಕಂಪನಿ ಉದ್ಯೋಗಿ, ತಾಯಿ ಚಂದನ ಗೃಹಿಣಿ.

ವಿದ್ಯಾರ್ಥಿನಿಯರೇ ಬೆಸ್ಟ್​ 

ಈ ಬಾರಿಯು ದ್ವೀತಿಯ ಪಿಯು ಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದಿದ್ದ ಒಟ್ಟು 24,316 ವಿದ್ಯಾರ್ಥಿಗಳಲ್ಲಿ 10090 ಬಾಲಕರಲ್ಲಿ 6471 ಮಂದಿ (ಶೇ.64.13) ತೇರ್ಗಡೆ ಹೊಂದಿದ್ದಾರೆ. ಇನ್ನೂ 14,226 ವಿದ್ಯಾರ್ಥಿನಿಯರಲ್ಲಿ 10,298 (ಶೇ.72.39) ಬಾಲಕಿಯರು ತೇರ್ಗಡೆ ಹೊಂದಿದ್ದಾರೆ.

ನಗರ ಪ್ರದೇಶದ 19216 ವಿದ್ಯಾರ್ಥಿಗಳಲ್ಲಿ 13,371 (ಶೇ.69.58), ಗ್ರಾಮೀಣ ಪ್ರದೇಶದ 5.100 ವಿದ್ಯಾರ್ಥಿಗಳಲ್ಲಿ 3398 (ಶೇ 66.63) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಬಾರಿ ಶೇ.2.95 ರಷ್ಟರಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು ಕೊಂಚ ಮೇಲುಗೈ ಸಾಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net