

ಬೆಂಗಳೂರು: ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ), ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್(ಬಿಸಿಐಸಿ)ಗಳ ಸಹಭಾಗಿತ್ವದಲ್ಲಿ ಮಲ್ಲೆಶ್ವರಂನಲ್ಲಿರುವ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಜೂ.22ರಂದು ವಿಕಲಾಂಗ ಯುವಕರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಮೇಳ ನಡೆಯಲಿದೆ.
ಅಂಗ ವೈಕಲ್ಯತೆಯುಳ್ಳ ಯುವಕರಿಗೆ ಮುಖ್ಯವಾಹಿನಿಯಲ್ಲಿ ಉದ್ಯೋಹ ಹಾಗೂ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳಿಗೆ ವೃತ್ತಿ ಅವಕಾಶಗಳನ್ನು ಕಲ್ಪಿಸಿಕೊಡುವ ಗುರಿಯನ್ನು ಉದ್ಯೋಗ ಮೇಳ ಹೊಂದಿದೆ.
ಬಿಪಿಒ, ರಿಟೇಲ್, ಬಿಎಫ್ಎಸ್ಐ, ಆಟೋಮೋಟಿವ್, ಹಾರ್ಟಿಕಲ್ಚರ್, ಹೆಲ್ತ್ಕೇರ್, ಲಾಜಿಸ್ಟಿಕ್ಸ್, ಫ್ಯಾಶನ್, ಲೈಫ್ಸ್ಟೆಲ್ ಸೇರಿದಂತೆ ವಿವಿಧ ವಲಯಗಳ 50ಕ್ಕೂ ಹೆಚ್ಚು ಪ್ರಸಿದ್ಧ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ.