ಬೆನಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ತಜ್ಞ ವೈದ್ಯರ ಸೇವೆ

Bel_Benaka-Hospital
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಗಾಯಗಳು ಹಾಗೂ ಅನಾರೋಗ್ಯದ ರೋಗಿಗಳಿಗೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ತುರ್ತು ಚಿಕಿತ್ಸೆ ಅಥವಾ ಎಮರ್ಜೆನ್ಸಿ ಮೆಡಿಸಿನ್ ಕ್ಷೇತ್ರದ ಪರಿಣಿತರು ಇಂತಹ ಚಿಕಿತ್ಸೆ ನೀಡುತ್ತಾರೆ. ಈ ವಿಶೇಷ ಸೇವೆ ಇಂದಿನಿಂದ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಹೇಳಿದರು.

ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಗೋಪಾಲ ಕೃಷ್ಣ ತುರ್ತು ಚಿಕಿತ್ಸಾ ತಜ್ಞ ಡಾ.ಆದಿತ್ಯ ರಾವ್ ಅವರನ್ನು ಸ್ವಾಗತಿಸಿ ಮಾತನಾಡಿ, ತುರ್ತುಸ್ಥಿತಿಯನ್ನು ದಾಟಿದ ನಂತರ ರೋಗಿಗಳಿಗೆ ಮಧ್ಯಂತರ ಅನುಸರಣಾ ಆರೈಕೆ ಒಳಗೊಂಡಿರುತ್ತದೆ. ಲಭ್ಯತೆ, ಮತ್ತು ಸುಧಾರಿತ ರೋಗ ನಿರ್ಣಯದ ಸಾಮರ್ಥ್ಯ ಸಕಾಲಿಕ ಮತ್ತು ಜೀವ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬೆಳ್ತಂಗಡಿ ತಾಲೂಕಿನಲ್ಲಿ ಮೊತ್ತಮೊದಲ ಬಾರಿಗೆ ಈ ವಿಶಿಷ್ಟ ಸೇವೆಯನ್ನು ಬೆನಕ ಆಸ್ಪತ್ರೆ ಒದಗಿಸಲಿದೆ ಎಂದರು.

ತುರ್ತು ಚಿಕಿತ್ಸಾ ತಜ್ಞ ಡಾ.ಆದಿತ್ಯ ರಾವ್ ಮಾತನಾಡಿ, ಗುಣಮಟ್ಟದ ತುರ್ತು ವೈದ್ಯಕೀಯ ಆರೈಕೆ ರಸ್ತೆ ಆಪಘಾತ, ಸೆಪ್ಸಿಸ್, ಪಾರ್ಶ್ವವಾಯು, ಹೃದಯಾಘಾತ, ಗರ್ಭಾವಸ್ಥೆಯ ಮತ್ತು ಹೆರಿಗೆಯ ತೀವ್ರ ತೊಡಕುಗಳು ಹಾಗೂ ಅನೇಕ ಬಾಲ್ಯದ ಸೋಂಕುಗಳ ವಿನಾಶಕಾರಿ ಪರಿಣಾಮಗಳನ್ನು ತಡೆಯುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂದರು.

ಡಾ.ಭಾರತಿ ಜಿ.ಕೆ, ಡಾ.ಅಂಕಿತಾ ಜಿ.ಭಟ್, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net